Publish Date: Thu, 26 Oct 2023 (17:28 IST)
Updated Date: Thu, 26 Oct 2023 (17:30 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಇತ್ತೀಚೆಗೆ ಸುದ್ದಿ ಹಬ್ಬಿತ್ತು.
ಆದರೆ ಇಬ್ಬರೂ ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೆ ನೀಡಿರಲಿಲ್ಲ. ಆದರೆ ಇತ್ತೀಚೆಗೆ ಅನುಷ್ಕಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ವಿರಳವಾಗಿರುವುದು ನೋಡಿದರೆ ಆ ಅನುಮಾನಗಳು ನಿಜವೆನಿಸುತ್ತಿತ್ತು.
ಇದೀಗ ಅನುಷ್ಕಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಬೇಬಿ ಬಂಪ್ ಕಾಣುವಂತಹ ಫೋಟೋವೊಂದನ್ನು ಪ್ರಕಟಿಸಿದ್ದಾರೆ. ಫೋನ್ ಜಾಹೀರಾತೊಂದರ ಪೋಸ್ಟ್ ಮಾಡುವಾಗ ಅನುಷ್ಕಾ ಉಬ್ಬು ಹೊಟ್ಟೆ ಎಲ್ಲರ ಗಮನ ಸೆಳೆದಿದೆ. ಈ ಮೂಲಕ ಎರಡನೇ ಮಗುವಿನ ಸುದ್ದಿ ನಿಜವೆಂದು ಸಾಬೀತಾಗಿದೆ.