ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾದಲ್ಲಿ ನಾವಿಬ್ಬರೂ ಬೇರೆಯಾಗುತ್ತಿದ್ದೇವೆ ಎಂದು ಪೋಸ್ಟ್ ಹಾಕಿ ನೆಟ್ಟಿಗರಿಗೆ ಶಾಕ್ ನೀಡಿದ್ದರು.
ನಾವಿಬ್ಬರೂ ಬೇರೆಯಾಗುತ್ತಿದ್ದೇವೆ. ಈ ಸಮಯದಲ್ಲಿ ನಮಗೆ ನಮ್ಮ ಸಮಯ ಕೊಡಿ ಎಂದು ರಾಜ್ ಕುಂದ್ರಾ ಬರೆದುಕೊಂಡಿದ್ದು ನೋಡಿ ಪತ್ನಿ ಶಿಲ್ಪಾ ಶೆಟ್ಟಿಯಿಂದ ರಾಜ್ ಬೇರೆಯಾಗುತ್ತಿದ್ದಾರಾ ಎಂದು ಹಲವರು ಅಚ್ಚರಿಪಟ್ಟಿದ್ದರು.
ಅಶ್ಲೀಲ ಸಿನಿಮಾ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಬಂಧಿತರಾದಾಗಲೂ ಶಿಲ್ಪಾ ಪತಿಯ ಕೈ ಬಿಟ್ಟಿರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ದಂಪತಿಯ ನಡುವೆ ವಿರಸ ಯಾಕೆ ಬಂತು ಎಲ್ಲರೂ ಅಚ್ಚರಿಪಟ್ಟರು. ಆದರೆ ಕೆಲವು ಹೊತ್ತಿನ ನಂತರ ರಾಜ್ ಬೇರೆಯಾಗುತ್ತಿರುವುದು ಪತ್ನಿ ಶಿಲ್ಪಾರಿಂದ ಅಲ್ಲ ಎಂದು ಸ್ಪಷ್ಟವಾಗಿದೆ.