Select Your Language

Notifications

webdunia
webdunia
webdunia
webdunia

ನಾದಿನಿ, ಅತ್ತೆಗೆ ಠಕ್ಕರ್ ಕೊಟ್ಟ ಐಶ್ವರ್ಯಾ ರೈ ಬಚ್ಚನ್: ಫ್ಯಾಮಿಲಿ ಫೋಟೋ ಕ್ರಾಪ್ ವಿವಾದ

ನಾದಿನಿ, ಅತ್ತೆಗೆ ಠಕ್ಕರ್ ಕೊಟ್ಟ ಐಶ್ವರ್ಯಾ ರೈ ಬಚ್ಚನ್: ಫ್ಯಾಮಿಲಿ ಫೋಟೋ ಕ್ರಾಪ್ ವಿವಾದ
ಮುಂಬೈ , ಗುರುವಾರ, 12 ಅಕ್ಟೋಬರ್ 2023 (17:30 IST)
Photo Courtesy: Twitter
ಮುಂಬೈ: ನಟಿ ಐಶ್ವರ್ಯಾ ರೈ ಬಚ್ಚನ್  ಮಾವ ಅಮಿತಾಭ್ ಬಚ್ಚನ್ ಹುಟ್ಟುಹಬ್ಬಕ್ಕೆ ಪ್ರಕಟಿಸಿದ ಫೋಟೋವೊಂದು ಈಗ ನೆಟ್ಟಿಗರಲ್ಲಿ ಚರ್ಚೆಗೆ ಕಾರಣವಾಗಿದೆ. ಬಚ್ಚನ್ ಕುಟುಂಬದಲ್ಲಿ ಒಳಗೊಳಗೆ ಕಿರಿಕ್ ಇದೆ ಎಂದು ಅನುಮಾನ ಮೂಡಿಸಿದೆ.
 

ಅಮಿತಾಭ್ ಗೆ ಶುಭ ಕೋರುವ ಪೋಸ್ಟ್ ಹಾಕಿದ್ದ ಐಶ್ವರ್ಯಾ ಫ್ಯಾಮಿಲಿ ಫೋಟೋವೊಂದನ್ನು ಕ್ರಾಪ್ ಮಾಡಿ ಹಾಕಿದ್ದಾರೆ. ನಿಜವಾದ ಫೋಟೋದಲ್ಲಿ ಐಶ್ವರ್ಯಾ ಪುತ್ರಿ ಆರಾಧ‍್ಯ, ಅಮಿತಾಭ್ ಬಚ್ಚನ್ ಜೊತೆಗೆ ಅತ್ತೆ ಜಯಾ ಬಚ್ಚನ್ ಮತ್ತು ನಾದಿನಿ ಶ್ವೇತಾ ಬಚ್ಚನ್ ಮಕ್ಕಳೂ ಇದ್ದರು.

ಆದರೆ ಐಶ್ ಅತ್ತೆ, ನಾದಿನಿ ಮಕ್ಕಳ ಫೋಟೋ ಕ್ರಾಪ್ ಮಾಡಿ ಕೇವಲ ಮಗಳು ಆರಾಧ‍್ಯ ಮತ್ತು ಮಾವ ಅಮಿತಾಭ್ ಫೋಟೋವನ್ನು ಮಾತ್ರ ಹಾಕಿ ಶುಭ ಕೋರಿದ್ದಾರೆ. ಇದು ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಕೆಲವು ದಿನಗಳ ಹಿಂದೆ ಪ್ಯಾರಿಸ್ ಫ್ಯಾಶನ್ ವೀಕ್ ನಲ್ಲಿ ಶ್ವೇತಾ ಮತ್ತು ಆಕೆಯ ಮಗಳು ನವ್ಯಾ ಕೂಡಾ ಐಶ್ವರ್ಯಾ ಜೊತೆಗೆ ಭಾಗಿಯಾಗಿದ್ದರು. ಆದರೆ ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಪ್ರಕಟಿಸುವಾಗ ಐಶ್ವರ್ಯಾರನ್ನು ಬಿಟ್ಟು ತಮ್ಮ ಫೋಟೋ ಮಾತ್ರ ಹಾಕಿಕೊಂಡಿದ್ದರು. ಇದೇ ಕಾರಣಕ್ಕೆ ಐಶ್ ಈಗ ಟಿಕ್ ಫಾರ್ ಟ್ಯಾಕ್ ಎನ್ನುವಂತೆ ನವ್ಯಾ ಮತ್ತು ಜಯಾ ಫೋಟೋ ಎಡಿಟ್ ಮಾಡಿರಬಹುದು ಎಂದು ನೆಟ್ಟಿಗರು ಊಹಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಡೋಂಗಿ ಎಂದಿದ್ದಕ್ಕೆ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಯ್ತು ಡ್ರೋಣ್ ಪ್ರತಾಪ್ ಕ್ರೇಜ್!