Publish Date: Sat, 30 Sep 2023 (16:11 IST)
Updated Date: Sat, 30 Sep 2023 (16:13 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಹೀಗೊಂದು ಸುದ್ದಿ ಹರಿದಾಡುತ್ತಿದೆ.
ಅನುಷ್ಕಾ ಇತ್ತೀಚೆಗೆ ಕೊಹ್ಲಿ ಜೊತೆಗೆ ಯಾವುದೇ ಕ್ರಿಕೆಟ್ ಪ್ರವಾಸದಲ್ಲಿ ಬರುತ್ತಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಅನುಷ್ಕಾ ಈಗ ಮತ್ತೆ ಗರ್ಭಿಣಿಯಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಸದ್ಯದಲ್ಲೇ ದಂಪತಿ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೊಹ್ಲಿ ದಂಪತಿಗೆ ಈಗಾಗಲೇ ಓರ್ವ ಪುತ್ರಿಯಿದ್ದಾಳೆ. ಅನುಷ್ಕಾ ಇದೀಗ ಯಾವುದೇ ಸಿನಿಮಾಗಳಲ್ಲೂ ನಟಿಸುತ್ತಿಲ್ಲ. ಹೀಗಾಗಿ ಎರಡನೇ ಮಗುವಿನ ಸುದ್ದಿಗೆ ಮತ್ತಷ್ಟು ಬಲ ಬಂದಿದೆ. ಇತ್ತೀಚೆಗೆ ಅನುಷ್ಕಾ ಕ್ಲಿನಿಕ್ ನಿಂದ ಹೊರಗಡೆ ಬರುತ್ತಿರುವುದು ಪಪ್ಪರಾಜಿಗಳ ಕಣ್ಣಿಗೆ ಬಿದ್ದಿತ್ತು. ಆದರೆ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸದಂತೆ ಅವರು ಮನವಿ ಮಾಡಿದ್ದರು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.