Select Your Language

Notifications

webdunia
webdunia
webdunia
webdunia

ಗೆಲುವಿನ ರೂವಾರಿಯಾದರೂ ವಿರಾಟ್ ಕೊಹ್ಲಿಯನ್ನು ಸ್ವಾರ್ಥಿ ಎಂದಿದ್ಯಾಕೆ ನೆಟ್ಟಿಗರು?!

ಗೆಲುವಿನ ರೂವಾರಿಯಾದರೂ ವಿರಾಟ್ ಕೊಹ್ಲಿಯನ್ನು ಸ್ವಾರ್ಥಿ ಎಂದಿದ್ಯಾಕೆ ನೆಟ್ಟಿಗರು?!
ಧರ್ಮಶಾಲಾ , ಸೋಮವಾರ, 23 ಅಕ್ಟೋಬರ್ 2023 (13:23 IST)
Photo Courtesy: Twitter
ಧರ್ಮಶಾಲಾ: ನ್ಯೂಜಿಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ರೂವಾರಿಯಾದರೂ ವಿರಾಟ್ ಕೊಹ್ಲಿಗೆ ಮತ್ತೆ ಸ್ವಾರ್ಥಿ ಎನ್ನುವ ಅಪವಾದ ಸಿಕ್ಕಿದೆ.

ಇದಕ್ಕೆ ಕಾರಣ ರವೀಂದ್ರ ಜಡೇಜಾ ಜೊತೆಗಿನ ರನ್ ಓಟದಲ್ಲಿ ನಡೆದಿದ್ದ ಗೊಂದಲ ಮತ್ತು ಸೂರ್ಯಕುಮಾರ್ ಯಾದವ್ ರನೌಟ್. ಮೊದಲು ವಿಕೆಟ್ ನಡುವೆ ಓಡುವಾಗ ಗೊಂದಲದಲ್ಲಿ ಸೂರ್ಯಕುಮಾರ್ ಕೇವಲ 2 ರನ್ ಗಳಿಸಿ ರನೌಟ್ ಆದರು. ಈ ವೇಳೆ ಟೀಂ ಇಂಡಿಯಾ ಸಂಕಷ್ಟಕ್ಕೀಡಾಯಿತು.

ಬಳಿಕ ರವೀಂದ್ರ ಜಡೇಜಾ ಜೊತೆಗೂ ಕೊಹ್ಲಿ ರನ್ ಕದಿಯುವಾಗ ಗೊಂದಲಕ್ಕೆ ಒಳಗಾದರು. ಜಡೇಜಾ ಬಾಲ್ ಹೊಡೆದು ಎರಡು ರನ್ ಕದಿಯುವ ಉದ್ದೇಶದಿಂದ ಓಡಿದರೆ ಕೊಹ್ಲಿ ಸಿಂಗಲ್ಸ್ ತೆಗೆದು ಕೈ ಎತ್ತಿದ್ದರು. ಆದರೆ ಇದನ್ನು ಗಮನಿಸದೇ ಜಡೇಜಾ ಕ್ರೀಸ್ ನ ಮಧ್ಯಭಾಗಕ್ಕೆ ಬಂದು ನಿಂತಿದ್ದರು. ಆದರೆ ಅದೃಷ್ಟವಶಾತ್ ಜಡೇಜಾ ಬಚಾವ್ ಆದರು. ಆಗ ಭಾರತದ ಮೊತ್ತ 240 ಆಗಿದ್ದರೆ ಕೊಹ್ಲಿ 75 ರನ್ ಗಳಿಸಿದ್ದರು. ಮತ್ತೆ ಕೊಹ್ಲಿ ಶತಕ ಗಳಿಸಲು ಈ ರೀತಿ ಸ್ವಾರ್ಥಿಯಂತೆ ವರ್ತಿಸಿದರು ಎಂದು ಕೆಲವು ನೆಟ್ಟಿಗರು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ಶತಕ ತಪ್ಪಿದರೂ ಅದಕ್ಕಿಂತಲೂ ಮಿಗಿಲಾದ ಕಿಂಗ್ ಕೊಹ್ಲಿ ಇನಿಂಗ್ಸ್