Publish Date: Sun, 22 Oct 2023 (09:15 IST)
Updated Date: Sun, 22 Oct 2023 (09:15 IST)
ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಟೀಂ ಇಂಡಿಯಾಗೆ ಪ್ರಬಲ ನ್ಯೂಜಿಲೆಂಡ್ ಎದುರಾಳಿಯಾಗಿದೆ.
ಈ ವಿಶ್ವಕಪ್ ಟೂರ್ನಿಯಲ್ಲಿ ಸೋಲೇ ಇಲ್ಲದೇ ಮೆರೆದಾಡುತ್ತಿರುವ ತಂಡಗಳೆಂದರೆ ಭಾರತ ಮತ್ತು ನ್ಯೂಜಿಲೆಂಡ್. ಈ ಎರಡು ತಂಡಗಳೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಇಂದಿನ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿರುವುದರಿಂದ ಟೀಂ ಇಂಡಿಯಾದಲ್ಲಿ ಬದಲಾವಣೆ ನಿರೀಕ್ಷಿಸಬಹುದು. ಪಾಂಡ್ಯ ಸ್ಥಾನಕ್ಕೆ ಅಶ್ವಿನ್ ಆಗಮನವಾಗುವ ನಿರೀಕ್ಷೆಯಿದೆ.
ಇತ್ತ ರಚಿನ್ ರವೀಂದ್ರ, ವಿಲ್ ಯಂಗ್ ಸೇರಿದಂತೆ ಬಲಾಢ್ಯ ಬ್ಯಾಟಿಂಗ್ ಹೊಂದಿರುವ ನ್ಯೂಜಿಲೆಂಡ್ ಭಾರತದ ಸ್ಪಿನ್ ದಾಳಿಯನ್ನು ಹೇಗೆ ನಿಭಾಯಿಸುತ್ತದೆ ಎಂದು ಕಾದುನೋಡಬೇಕಿದೆ. ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗಲಿದೆ.