ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾ ಮೈದಾನದಲ್ಲಿ ಪಂದ್ಯವಾಡಲಿದೆ.
ಆದರೆ ಈ ಪಂದ್ಯಕ್ಕೆ ಮಳೆಯಾಗುವ ಸಾಧ‍್ಯತೆಯಿದೆ ಎನ್ನಲಾಗಿದೆ. ಹವಾಮಾನ ವರದಿ ಪ್ರಕಾರ ಇಂದು ಶೇ.43 ರಷ್ಟು ಮಳೆಯಾಗುವ ಸಾಧ‍್ಯತೆಯಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ವಿಳಂಬವಾಗುವ ಸಾಧ‍್ಯತೆಯಿದೆ.
ಇಲ್ಲಿ ನಡೆದಿದ್ದ ಕಳೆದ ಪಂದ್ಯಕ್ಕೂ ಮಳೆ ಅಡ್ಡಿಯಾಗಿ ಟಾಸ್ ವಿಳಂಬವಾಗಿತ್ತು. ಇಂದೂ ಮತ್ತೆ ವರುಣ ಪಂದ್ಯ ಸರಾಗ ನಡೆಯಲು ಅವಕೃಪೆ ತೋರುವ ಸಾಧ‍್ಯತೆಯಿದೆ ಎನ್ನಲಾಗಿದೆ.