Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಹೊಂಚು

hollywood
bangalore , ಮಂಗಳವಾರ, 31 ಅಕ್ಟೋಬರ್ 2023 (12:13 IST)
ಹಾಲಿವುಡ್ ನ ಖ್ಯಾತ ನಟಿ ಏಂಜಲೀನಾ ಜೋಲಿ ಸೇರಿದಂತೆ ಹಲವು ನಟಿಯರು ಹಾರ್ವೆ ಲೈಂಗಿಕ ಹಗರಣಗಳನ್ನು ಬಯಲಿಗೆಳೆಯುತ್ತಿರುವ ಬೆನ್ನಲ್ಲೇ ಐಶ್ವರ್ಯಾ ರೈ ಕೆಲಸ ಮಾಡುತ್ತಿದ್ದ ಟ್ಯಾಲೆಂಟ್ ಕಂಪನಿ ಮ್ಯಾನೇಜರ್ ಸಿಮೋನ್ ಶೆಫಿಲ್ಡ್ ಈ ವಿಷಯ ಬಹಿರಂಗಪಡಿಸಿದ್ದಾನೆ.
 
ಬಾಲಿವುಡ್ ನಟಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಹಾಲಿವುಡ್ ನಿರ್ಮಾಪಕ ಹಾರ್ವೆ ವೇಯ್ ಸ್ಟೇಯ್ನ್ ಹೊಂಚು ಹಾಕಿದ್ದ ಎನ್ನುವ ಸಂಗತಿ ಇದೀಗ ಬಯಲಾಗಿದೆ.
 
ಹಲವು ಖ್ಯಾತ ನಟಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಈ ನಿರ್ಮಾಪಕ ಒಮ್ಮೆ ಐಶ್ವರ್ಯಾರನ್ನು ಹೊಸ ಸಿನಿಮಾದ ಚರ್ಚೆಗಾಗಿ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದ. ಆಗ ನಾನು ಅಲ್ಲಿಯೇ ಇದ್ದಿದ್ದು ಹಾರ್ವೆಗೆ ಇಷ್ಟವಾಗದೇ ಕೆಟ್ಟ ಉದ್ದೇಶದಿಂದ ನನ್ನನ್ನು ಹಲವು ಬಾರಿ ಹೊರ ಹೋಗುವಂತೆ ಹೇಳಿದ್ದ. 
 
ಆದರೆ ಆತನ ಉದ್ದೇಶ ಗೊತ್ತಿದ್ದ ನಾನು ಹೋಗಿರಲಿಲ್ಲ. ಐಶ್ವರ್ಯಾ ಹೊರ ಹೋದ ಮೇಲೆ ಆತ ನನ್ನ ಬಳಿ  ಯಾಕೆ ನೀನು ಆಕೆಯೊಂದಿಗೆ ನನ್ನನ್ನು ‘ಒಬ್ಬಂಟಿ’ಯಾಗಿ ಬಿಡಲಿಲ್ಲ ಎಂದು ಪ್ರಶ್ನಿಸಿದ್ದ ಎಂದು ಸಿಮೋನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಗೆ ಕಮ್ ಬ್ಯಾಕ್ ಮಾಡಿದ ದಿನವೇ ವರ್ತೂರು ಸಂತೋಷ್ ಗೆ ಶಾಕ್!