ತಿರುವನಂತಪುರಂ: ಕಾಂತಾರ ಸಿನಿಮಾದ ವರಾಹ ರೂಪಂ ಹಾಡು ತಮ್ಮ ನವರಸಂ ಹಾಡಿನ ನಕಲು ಎಂದು ಕೇರಳದ ಥೈಕುಡಂ ಬ್ರಿಡ್ಜ್ ತಂಡ ಆರೋಪಿಸಿ ಕೋರ್ಟ್ ಮೆಟ್ಟಿಲೇರಿತ್ತು.
ಸಿನಿಮಾ ಬಿಡುಗಡೆ ಸಂದರ್ಭದಲ್ಲೇ ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಕೇರಳ ಕೋರ್ಟ್ ವರಾಹ ರೂಪಂ ಹಾಡನ್ನು ಸಿನಿಮಾದಲ್ಲಿ ಬಳಸದಂತೆ ತಡೆ ನೀಡಿತ್ತು. ಹೀಗಾಗಿ ಕೆಲವು ಸಮಯ ಚಿತ್ರತಂಡ ಈ ಹಾಡಿನ ಬದಲಿಗೆ ಮತ್ತೊಂದು ಹಾಡನ್ನು ಬಳಸಿತು. ಬಳಿಕ ಕೋರ್ಟ್ ತಡೆಯಾಜ್ಞೆ ತೆರವಾಗಿ ವರಾಹ ರೂಪಂ ಹಾಡು ಮರಳಿತು. ಹಾಗಿದ್ದರೂ ಪ್ರಕರಣ ಕೋರ್ಟ್ ನಲ್ಲಿ ಮುಂದುವರಿದಿತ್ತು.
ಇದೀಗ ಕಾಂತಾರ ಮತ್ತು ತೈಕುಡಂ ಬ್ರಿಡ್ಜ್ ತಂಡದವರ ನಡುವೆ ಸಂಧಾನ ಮಾತುಕತೆ ಮೂಲಕ ವಿವಾದ ಬಗೆ ಹರಿಸಲಾಗಿದ್ದು, ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ.