Select Your Language

Notifications

webdunia
webdunia
webdunia
webdunia

ವಿವಾಹದ ಬಗ್ಗೆ ಬಾಲಿವುಡ್ ನಟಿ ತಮನ್ನಾ ಹೇಳಿದ್ದೇನು ಗೊತ್ತಾ?

ವಿವಾಹದ ಬಗ್ಗೆ ಬಾಲಿವುಡ್ ನಟಿ ತಮನ್ನಾ ಹೇಳಿದ್ದೇನು ಗೊತ್ತಾ?
mumbai , ಶನಿವಾರ, 4 ನವೆಂಬರ್ 2023 (09:49 IST)
ಪ್ರಸ್ತುತ ತನಗೆ ಮದುವೆ ಆಗುವ ಉದ್ದೇಶವಿಲ್ಲ. ಅಂತಹ ಸಮಯ ಬಂದಾಗ ತಾನು ತಪ್ಪದೇ ಈ ಸಂಗತಿಯನ್ನು ಎಲ್ಲರಿಗೂ ಬಹಿರಂಗವಾಗಿ ಹೇಳುತ್ತೇನೆ. ಕೆಲವರಂತೆ ತಾನು ಗುಟ್ಟಾಗಿ ಇಂತಹ ಸುದ್ದಿಗಳನ್ನು ಬಚ್ಚಿಡುವುದಿಲ್ಲ ಎಂದಿದ್ದಾಳೆ.ಅಲ್ಲದೆ ಸಿನಿಮಾ ಕೆರಿಯರ್‌ನಲ್ಲಿ ಯಾವುದೇ ಹೀರೋಯಿನ್ ಆಗಿರಲಿ 30 ವರ್ಷಗಳು ಪೂರೈಸಿದ ಬಳಿಕವಷ್ಟೇ ಮದುವೆ ಆಗೋದು ಎನ್ನುತ್ತಾ ನಾನಿನ್ನು ಯಂಗ್ ಎಂದು ಹೇಳಿದ್ದಾಳೆ. 
 
ದಕ್ಷಿಣ ಭಾರತದಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಂಡ ಚೆಲುವೆ ತಮನ್ನಾ, ತನ್ನ ಚಿತ್ತವನ್ನು ಬಾಲಿವುಡ್ ಕಡೆಗೆ ನೆಟ್ಟಳು. ಆದರೆ ಪಾಪ ಆ ಹೆಣ್ಣು ಮಗಳ ಅದೃಷ್ಟ ಸರಿ ಇಲ್ಲದ ಕಾರಣ ಆಕೆ ನಟಿಸಿದ ಚಿತ್ರಗಳು ಸೋತು ಮಕಾಡೆ ಮಲಗಿದವು. ಇದರಿಂದ ಆಕೆಯ ಸ್ಥಿತಿ ಅತಂತ್ರವಾಯಿತು. ಈ ಮಧ್ಯೆ ದಕ್ಷಿಣದಲ್ಲೂ ಸಹಿತ ಅವಕಾಶಗಳು ಕಡಿಮೆ ಆಯಿತು. 
 
ಸೋತವರ ಬಗ್ಗೆ ಯಾರಲ್ಲೂ ಕರುಣೆ ಇರಲ್ಲ, ಅಂತಹುದರಲ್ಲಿ ಚಿತ್ರರಂಗದವರು ಕ್ಯಾರೆ ಅನ್ನಲ್ಲ, ಆ ವಿಷಯ ಹಾಗಿರುವಾಗ ತಮ್ಮುಗೆ ಅವರ ಅಪ್ಪ ಅಮ್ಮ ಮದುವೆ ಮಾಡಲು ಗಂಡು ಹುಡುಕುತ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಇನ್ನು ಕೆಲವರು ಇನ್ನೇನು ಮದುವೆ ಮುಗಿದೇ ಹೋಯ್ತು ಎಂಬಂತೆ ಹಬ್ಬಿಸಿದರು. ಆದರೆ ಆಕೆ ಇತ್ತೀಚಿಗೆ ನಲ್ಲೂರಿಗೆ ಮೊಬೈಲ್ ಅಂಗಡಿಯ ಬಿಡುಗಡೆಗೆ ಬಂದಿದ್ದಳು. ಅಲ್ಲಿಗೆ ಬಂದವಳು ತನ್ನ ಮದುವೆಯ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾಳೆ.
 
ತನ್ನ ಮದುವೆಯ ವಿಷಯದಲ್ಲಿ ನಿರ್ಣಯವನ್ನು ಮನೆಯವರು ತೆಗೆದು ಕೊಳ್ಳುತ್ತಾರೆ, ತಾನು ಯಾರನ್ನು ಪ್ರೀತಿಸುತ್ತಿಲ್ಲ ಎಂದಿರುವ ಈ ಚೆಲುವೆ, ತನಗೆ ನೆಲ್ಲೂರಿನ ಅಡುಗೆಗಳೆಂದರೆ ತುಂಬಾ ಇಷ್ಟ, ಅದನ್ನು ಸವಿಯಲು ಇಚ್ಚಿಸುತ್ತೇನೆ ಎಂದಿದ್ದಾಳೆ.  

Share this Story:

Follow Webdunia kannada

ಮುಂದಿನ ಸುದ್ದಿ

ನಟ ಶಿವರಾಜ್ ಕುಮಾರ್ ಗೆ ಅನಾರೋಗ್ಯ