Select Your Language

Notifications

webdunia
webdunia
webdunia
webdunia

ಕುಡಿಯುವ ಅಭ್ಯಾಸ: ಸ್ನೇಹಿತನಿಗೆ ಹೆಂಡತಿ ಮಾರಾಟ ಮಾಡಿದ

drinking habbit
ಮಧ್ಯಪ್ರದೇಶ , ಗುರುವಾರ, 2 ನವೆಂಬರ್ 2023 (18:17 IST)
ಮಹಿಳೆಯನ್ನು ಕಾಸಿಗೆ ಖರೀದಿಸಿದ ವಾಲೋದ್‌ ಮತ್ತು ಮಾರಾಟ ಮಾಡಿದ ಚವಾಣ್‌ಗೆ ಪೊಲೀಸ್‌ ಕಸ್ಟಡಿ ವಿಧಿಸಲಾಗಿದೆ. ಹೆಂಡ ಕುಡಿಯಲು ಹೆಂಡತಿಯನ್ನೇ ಸ್ನೇಹಿತನಿಗೆ ಮಾರಿದ ಮದ್ಯವ್ಯಸನಿ ಪೊಲೀಸರಿಗೆ ಸೆರೆಯಾಗಿದ್ದಾನೆ.
 
ಇಲ್ಲಿಂದ 625 ಕಿ.ಮೀ.ದೂರದ ವಿದರ್ಭ ವಲಯದ ಅಕೋಲಾದಲ್ಲಿ ಜೂನ್‌ ತಿಂಗಳಲ್ಲಿ ಆರೋಪಿ ಪುಂಡ್ಲಿಕ್‌ ಚವಾಣ್‌ ತನ್ನ ಪತ್ನಿ ಸಂಗೀತಾ ಅವರನ್ನು ತನ್ನ ಆಪ್ತಮಿತ್ರ, ಮಧ್ಯಪ್ರದೇಶ ಮೂಲದ ಗಣೇಶ್‌ ವಾಲೋದ್‌ ಎಂಬಾತನಿಗೆ 25,000 ರೂಪಾಯಿಗೆ ಮಾರಾಟ ಮಾಡಿದ್ದ. ಈ ಸಂಬಂಧ ಸಂಗೀತಾ ಅವರ ಸಹೋದರಿ ಜು.12ರಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅನಂತರ ಚವಾಣ್‌ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
 
ವಾಲೋದ್‌ ಜತೆ ತಾನೂ ಸಂಬಂಧ ಬೆಳೆಸಿಕೊಂಡಿದ್ದೆ. 'ಮಾರಾಟದ ವಸ್ತು'ವಾದ ಅನಂತರ ವಾಲೋದ್‌ನನ್ನು ಮದುವೆಯಾದೆ ಎಂದು ಸಂಗೀತಾ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಸುಖ: ಪತಿಯ ದಾಹದಿಂದ ಬೇಸತ್ತು ಇಂತಹ ಕೃತ್ಯ ಎಸಗಿದ ಪತ್ನಿ