Select Your Language

Notifications

webdunia
webdunia
webdunia
Sunday, 13 April 2025
webdunia

ಶಾರುಕ್ ಖಾನ್ ಪ್ರತಿ ನಿಮಿಷಕ್ಕೆ ಎಷ್ಟು ಸಂಬಾವನೆ ಗೊತ್ತ?

shahrukh khan
mumbai , ಗುರುವಾರ, 2 ನವೆಂಬರ್ 2023 (14:44 IST)
ಶಾರುಕ್ ಪ್ರತಿ ನಿಮಿಷಕ್ಕೆ 26 ಲಕ್ಷ ರೂಪಾಯಿಗಳ ಶುಲ್ಕಪಡೆಯುತ್ತಾನೆ. ದುಬೈನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಕೆಲ ನಿಮಿಷಗಳ ನೃತ್ಯಕ್ಕಾಗಿ 8 ಕೋಟಿ ರೂಪಾಯಿ ಪಡೆದಿದ್ದರು. ಮುಂಬೈಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ 30 ನಿಮಿಷಗಳ ಕಾಲ ಹಾಜರಿರಲು 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಕೋಟಿ ಕೋಟಿ ಪಡೆಯುತ್ತಿದ್ದರೂ ವಿವಾಹ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ವಾರ್ಷಿಕವಾಗಿ 250 ಆಹ್ವಾನಗಳನ್ನು ಪಡೆಯುತ್ತಿದ್ದಾರೆ. ಆದರೆ, ಶಾರುಕ್ ಸರಾಸರಿ 10 ವಿವಾಹ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ.
 
 
ಬಾಲಿವುಡ್ ಬಾದಷಾಹ್ ಶಾರುಕ್ ಖಾನ್ 3000 ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿದ ಶ್ರೀಮಂತರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಶಾರುಕ್ ಖಾನ್ ಒಟ್ಟು 400 ಮಿಲಿಯನ್ ಡಾಲರ್ ಸಂಪಾದನೆಯಿಂದಾಗಿ ದೇಶದ ಶ್ರೀಮಂತರ ಪಟ್ಟಿಯಲ್ಲಿ 114ನೇ ಸ್ಥಾನವನ್ನು ಪಡೆದಿದ್ದಾರೆ. 
 
ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಶೇರುಪೇಟೆ ಮತ್ತು ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ 800 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ. ಲಂಡನ್ ಮತ್ತು ದುಬೈನಲ್ಲಿ ಫಾಟ್ ಖಾನ್ ಬರ್ಗರ್ ಚೈನ್ ಹೋಟೆಲ್ ಮಾಲೀಕರಾಗಿದ್ದಾರೆ. ದೆಹಲಿಯಲ್ಲಿ ಏಂಜೆಲ್ಸ್ ಫುಟ್ಬಾಲ್ ತಂಡದ ಮಾಲೀಕತ್ವವನ್ನು ಹೊಂದಿದ್ದಾರೆ
 
ಶಾರುಕ್ ಖಾನ್ ತಮ್ಮ ಹೆಸರಲ್ಲಿ ವಂಡರ್ ಖಾನ್ ಎನ್ನುವ ವೋಡ್ಕಾ ಮತ್ತು ಶಾರುಕ್ ಖಾನ್ ಸೆಡಕ್ಷನ್ ಎನ್ನುವ ಪರ್ಫ್ಯೂಮ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. 35-40 ವಿಶ್ವಮಟ್ಟದ ಬ್ರ್ಯಾಂಡ್ ಕಂಪೆನಿಗಳಿಗೆ ರಾಯಭಾರಿಯಾಗಿದ್ದಾರೆ
 
ಡಿಟಿಎಚ್‌ ಮೂರು ದಿನಗಳ ಜಾಹೀರಾತಿಗೆ 7 ಕೋಟಿ ರೂಪಾಯಿ ಸಂಬಾವನೆ ಪಡೆದಿದ್ದಾರೆ. ಸೆಲೆಬ್ರೆಟಿಗಳಲ್ಲಿ ಅತ್ಯಂತ ಹೆಚ್ಚಿನ ಆದಾಯ ಹೊಂದಿದವರ ಸಾಲಿನಲ್ಲಿ ಶಾರುಕ್ ಅಗ್ರಸ್ಥಾನ ಪಡೆದಿದ್ದಾರೆ.
 
ಕೋಲ್ಕತಾ ನೈಟ್ ರೈಡರ್ಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ಕಿಡ್ ಝಾನಿಯಾ ಇಂಡಿಯಾ ಎನ್ನುವ ಬೃಹತ್ ಕಂಪೆನಿಗಳ ಮಾಲೀಕರಾಗಿದ್ದಾರೆ. ಐಪಿಎಲ್‌ ಸೀಸನ್‌ 1 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ 11 ಕೋಟಿ ರೂಪಾಯಿ ಆದಾಯಗಳಿಸಿತ್ತು. ಪ್ರಸಕ್ತ ವರ್ಷ 18 ಕಂಪೆನಿಗಳ ಪ್ರಾಯೋಜಕತ್ವವನ್ನು ಹೊಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಮಲ್ಲಿಕಾ ಶರಾವತ್ ಇಷ್ಟಾನೆ ಬೇರೆ ಆಗಿದೆ: ನಿಮಗೆ ಗೊತ್ತೆ?