Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆ ಸಂಭಾವನೆ ಕೇಳಿದ್ರೆ ದಂಗಾಗುತ್ತೀರಾ? ಎಷ್ಟು ಗೊತ್ತಾ?

deepika padukone
mumbai , ಶನಿವಾರ, 4 ನವೆಂಬರ್ 2023 (10:15 IST)
ಇತ್ತೀಚಿಗೆ ಆಕೆಯನ್ನು ಓರ್ವ ಪ್ರಸಿದ್ಧ ನಿರ್ಮಾಪಕರು ಭೇಟಿಯಾದರಂತೆ. ಅವರು ಆಕೆಯ ಬಳಿ ತಮ್ಮ ಚಿತ್ರದಲ್ಲಿ ನಟಿಸಬೇಕು  ಕಾಲ್ಶೀಟ್ ಕೊಡ್ತೀಯ ಎಂದು ಕೇಳಿದರಂತೆ. ಆಕೆ ಆ ಚಿತ್ರದ ಸ್ಟಾರ್ ಕಾಸ್ಟಿಂಗ್ ಬಗ್ಗೆ ತಿಳಿದುಕೊಂಡಳು. ನಿರ್ಮಾಪಕ ಕಥೆ ಸೇರಿದಂತೆ ಎಲ್ಲ ಸಂಗತಿಯನ್ನು ಉತ್ಸಾಹದಿಂದ ಹೇಳಿದರು. ಅದರಲ್ಲಿ ಸಲ್ಮಾನ್ ಖಾನ್ ಮುಖ್ಯ ಪಾತ್ರಧಾರಿಯಾಗಿದ್ದು,  ಡಿಪ್ಪಿಗೆ ಎರಡನೇ ಹೀರೋಯಿನ್ ಪಾತ್ರ. ಆದರೆ ಆತ  ಆಕೆಗೆ ನೀಡಿದ ಪಾತ್ರದಲ್ಲಿ 20 ನಿಮಿಷಗಳು ಅರೆಬೆತ್ತಲಾಗಿರಬೇಕು. ಅಂದರೆ ಈಕೆ ಬಿಕಿನಿ ಧರಿಸಿರಬೇಕು.
 
ಬಿ ಟೌನ್ ನಲ್ಲಿ ಹಾಟೆಸ್ಟ್ ನಟಿಯಾಗಿದ್ದಾಳೆ ದೀಪಿಕಾ ಪಡುಕೋಣೆ. ಈ ವಿಷಯದಲ್ಲಿ ಆಕೆ  ಮೊದಲ ಸ್ಥಾನ ಹೊಂದಿದ್ದಾಳೆ. ಆಕೆಗೆ ಈಗ  ಸಾಕಷ್ಟು ಅವಕಾಶಗಳು ದೊರಕುತ್ತಿವೆ. ಪ್ರಸ್ತುತ ಆಕೆ ತನ್ನ ಸಹ ನಟಿಯರಾದ ಪ್ರೀಯಾಂಕ, ಕತ್ರಿನ  ಹಾಗೂ ಕರೀನ ಗಿಂತ ಹೆಚ್ಚು ಹೆಚ್ಚು ಮುನ್ನಡೆಯುತ್ತಿದ್ದಾಳೆ.
 
ಕೇವಲ 20ನಿಮಿಷಗಳು ಅವಕಾಶ ನೀಡಿದ್ದಲ್ಲದೆ, ಬಿಕಿನಿ ಧರಿಸಿರ ಬೇಕು ಎನ್ನುವ ಸಂಗತಿಗೆ ಈ ಕರಾವಳಿ ಸುಂದರಿ ಸರಿಯಾದ ಉತ್ತರ   ನೀಡಿದ್ದಾಳೆ. ನನಗೆ 30  ಕೋಟಿ ಕೊಟ್ರೆ ನಾನು ಈ ಪಾತ್ರದಲ್ಲಿ ನಟಿಸ್ತೀನಿ. ಆ ಮಾತು ಕೇಳಿ ದಂಗಾಗಿದ್ದು ನಿರ್ಮಾಪಕ. ಆಗ ಆಕೆ ತಾನು ಈ ರೀತಿ ನಟಿಸಿದರೆ ನನ್ನ ಇಮೇಜ್ ಮೇಲೆ  ತುಂಬಾ ಪರಿಣಾಮ ಬೀರುತ್ತದೆ. ಆದ ಕಾರಣ ತನಗೆ ಇಷ್ಟು ಮೊತ್ತ ನೀಡಿದರೆ ನೀವು ಹೇಳಿದಂತೆ ನಟಿಸುತ್ತೇನೆ , ಮೊದಲು ನಿರ್ಧಾರ ಮಾಡಿ ಆಮೇಲೆ ನನಗೆ ನಿಮ್ಮ ಅಭಿಪ್ರಾಯ ಹೇಳಿ ಎಂದು ಆಕೆ ಹೇಳಿದ್ದಾಳಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹದ ಬಗ್ಗೆ ಬಾಲಿವುಡ್ ನಟಿ ತಮನ್ನಾ ಹೇಳಿದ್ದೇನು ಗೊತ್ತಾ?