Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಗಂಧದ ಕಟ್ಟಿಗೆ ವಶ; ಇಬ್ಬರ ಬಂಧನ

ಅಕ್ರಮ
ಅಕ್ರಮವಾಗಿ ಗಂಧದ ಕಟ್ಟಿಗೆ ಸಾಗಿಸುತ್ತಿದ್ದ ಇಬ್ಬರನ್ನು ಖಚಿತ ಮಾಹಿತಿ ಮೇರೆಗೆ  ದಾಳಿ ನಡೆಸಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಹೊರವಲಯದಲ್ಲಿ ಐಗಳಿ ಪೊಲೀಸರು ನಡೆಸಿದ ಕಾರ್ಯಾಚರಣೆ ಇದಾಗಿದ್ದು, ಅಂದಾಜು ಒಂದು ಕ್ವಿಂಟಲ್ ಇಪ್ಪತ್ತು ಕೆ.ಜಿ ಗಂಧದ ಮರದ ತುಂಡುಗಳು ತುಂಬಿದ ಚೀಲಗಳನ್ನು ಆರೋಪಿಗಳ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ತುಕಾರಾಮ ಮತ್ತು ತೌಶಿಪ್ ಎಂದು ಗುರುತಿಸಲಾಗಿದೆ.

ಟಾಟಾ ಇಕೋ ವಾಹನದಲ್ಲಿ ಅಥಣಿ ತಾಲ್ಲೂಕಿನ ತೆಲಸಂಗ ಗ್ರಾಮದಿಂದ ಮಹಾರಾಷ್ಟ್ರಕ್ಕೆ ಗಂಧದ ಕಟ್ಟಿಗೆಗಳನ್ನು ಸಾಗಿಸುತ್ತಿದ್ದರು. ಐಗಳಿ ಪೊಲೀಸರ  ಕ್ಷಿಪ್ರ ಕಾರ್ಯಾಚರಣೆಯಿಂದ ಆರೋಪಿಗಳು ಅಂದರ್ ಆಗಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ವಿಷಯದಲ್ಲಿ ಕಾಂಗ್ರೆಸ್ ವಿರೋಧಿಸಲ್ಲ ಎಂದ ಪೇಜಾವರ ಶ್ರೀ