Select Your Language

Notifications

webdunia
webdunia
webdunia
webdunia

ಅಕ್ರಮ ಗಣಿಗಾರಿಕೆಗೆ ಹೆಚ್ಚಿದ ವಿರೋಧ

ಅಕ್ರಮ ಗಣಿಗಾರಿಕೆಗೆ ಹೆಚ್ಚಿದ ವಿರೋಧ
ಚಾಮರಾಜನಗರ , ಸೋಮವಾರ, 4 ಫೆಬ್ರವರಿ 2019 (17:16 IST)
ಗುಂಡು ಕಲ್ಲು ಬೆಟ್ಟದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ‌ ಕನಗನಮರಡಿ ಗ್ರಾಮದ ಸಮೀಪದಲ್ಲಿರುವ ಗುಂಡು ಕಲ್ಲು ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಗಣಿಗಾರಿಕೆ ಸ್ಥಳಕ್ಕೆ ತೆರಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕನಗನಮರಡಿ ಗ್ರಾಮದ ಸಮೀಪದ ಗುಂಡು ಕಲ್ಲು ಬೆಟ್ಟದಲ್ಲಿ ಕಳೆದ ಒಂದೂವರೆ ವರ್ಷದಿಂದ ಮೈಸೂರಿನ ಅಶೋಕ್ ಪಾಟೀಲ್ ಎಂಬುವರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಗ್ರಾಮದ ಮನೆಗಳು ಬಿರುಕು ಬಿಡುತ್ತಿವೆ. ಸುತ್ತಮುತ್ತಲ ಪ್ರದೇಶದ ಜಮೀನಿಗೆ ಧೂಳು ಬರುತ್ತಿದೆ. ರೈತರಿಗೆ ಸಂಕಷ್ಟ ಎದುರಾಗಿರುವುದನ್ನು ವಿರೋಧಿಸಿ ಗಣಿಗಾರಿಕೆ ಸ್ಥಳಕ್ಕೆ ತೆರಳಿ ಲಾರಿ ಹಾಗೂ ವಾಹನಗಳನ್ನು ತಡೆದು ಗಣಿಗಾರಿಕೆ ನಿಲ್ಲಿಸಬೇಕೆಂದು ವಿರೋಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತೃಪ್ತ ಶಾಸಕರು ಮೋಜು ಮಸ್ತಿಗೆ ಹೋಗಿದ್ದಾರೆ ಎಂದ ಸಚಿವ!