Publish Date: Mon, 04 Feb 2019 (17:01 IST)
Updated Date: Mon, 04 Feb 2019 (17:03 IST)
ಅತೃಪ್ತ ಕೈ ಶಾಸಕರು ಎಲ್ಲಿ ಹೋಗುತ್ತಾರೆ. ಮೋಜು ಮಸ್ತಿಗೆ ಹೋಗಿರಬಹುದು. ಬರ್ತಾರೆ, ಅವರು ನಮ್ಮಂಗೆ ಹಳ್ಳಿಯಲ್ಲಿ ಕೂರಬೇಕೆಂದೇನಿಲ್ಲ ಎಂದು ಸಚಿವರೊಬ್ಬರು ಹೇಳಿದ್ದಾರೆ.
ಅತೃಪ್ತ ಶಾಸಕರು ಕಾಂಗ್ರೆಸ್ ಸಂಪರ್ಕಕ್ಕೆ ಸಿಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜನ ಮತ ಹಾಕಿದ್ದಾರೆ. ಮತ ಹಾಕಿರುವ ಜನರ ಹತ್ತಿರ ಬಂದೇ ಬರ್ತಾರೆ ಎಂದು ಮಂಡ್ಯದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ನೀಡಿದ್ದಾರೆ.
ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸೀಟು ಕೇಳೋದು ಅವರ ಧರ್ಮ. ಕೊಡೋದು ಬಿಡೋದು ಜೆಡಿಎಸ್ ನಾಯಕರಿಗೆ ಸೇರಿದ್ದು ಎಂದರು.
ನಮ್ಮ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತೋ ನೋಡೋಣ. ಕಾಂಗ್ರೆಸ್ ಅವ್ರು ಮಂಡ್ಯ ಕ್ಷೇತ್ರ ಕೇಳಲು ಯಾವ ಅರ್ಥ ಇದೆ ಎಂದರು. ಏಳಕ್ಕೆ ಏಳು ಕ್ಷೇತ್ರದಲ್ಲೂ ಜೆಡಿಎಸ್ ಗೆದ್ದಿದೆ. ಹೇಗೆ ಬಿಟ್ಟು ಕೊಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.