Select Your Language

Notifications

webdunia
webdunia
webdunia
webdunia

ದಂಧೆಯಲ್ಲಿ ತೊಡಗಿದ್ದವರು ದಿಕ್ಕಾಪಾಲು; ಮಧ್ಯರಾತ್ರಿ ನಡೆಯಿತು ದಾಳಿ!

webdunia
ತುಮಕೂರು , ಶನಿವಾರ, 9 ಫೆಬ್ರವರಿ 2019 (14:27 IST)
ತಡರಾತ್ರಿ ಅಧಿಕಾರಿಗಳು ದಾಳಿ ನಡೆಸಿದ್ದೇ ತಡ, ದಂಧೆಯಲ್ಲಿ ತೊಡಗಿದ್ದ ಜನರು ದಿಕ್ಕಾಪಾಲಾಗಿ ಓಡಿಹೋದ ಘಟನೆ ನಡೆದಿದೆ.
ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೇಲೆ ದಾಳಿ ನಡೆಸಲಾಗಿದೆ.

ತುಮಕೂರು ನಗರದ ಮೇಳೆಕೋಟೆ ಗಂಗಸಂದ್ರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೇಲೆ ತಡರಾತ್ರಿ ದಾಳಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಡೆಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಹಾಂತೇಶಪ್ಪ ಮಾರ್ಗದರ್ಶನದಲ್ಲಿ ನವೀನ್ ನೇತೃತ್ವದ ತಂಡ ದಾಳಿ ನಡೆಸಿದೆ.

ಮಧ್ಯರಾತ್ರಿ ಒಂದು ಗಂಟೆಗೆ ದಾಳಿ ನಡೆಸಿದ ಅಧಿಕಾರಿಗಳನ್ನು ಕಂಡು ದಂಧೆಯಲ್ಲಿ ತೊಡಗಿದ್ದ ಆರೋಪಿಗಳು ಪರಾರಿಯಾದರು. ಮರಳು ಫಿಲ್ಟರ್ ಗೆ ಬಳಸುತ್ತಿದ್ದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.  
Share this Story:

Follow Webdunia kannada

ಮುಂದಿನ ಸುದ್ದಿ

ಉಮೇಶ್ ಜಾಧವ್ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗುವುದು ಖಚಿತ ಎಂದ ಬಿಜೆಪಿ ಮುಖಂಡ