Select Your Language

Notifications

webdunia
webdunia
webdunia
webdunia

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಘರ್ಜಿಸಿದ್ದೇನು?

webdunia
ಆನೇಕಲ್ , ಗುರುವಾರ, 7 ಫೆಬ್ರವರಿ 2019 (20:19 IST)
ಅಲ್ಲಿದ್ದ ಬಣ್ಣದ ಕಾರ್ಖಾನೆಗಳು ಹೇಳ ಹೆಸರಿಲ್ಲದಂತೆ ಏಕಾಏಕಿಯಾಗಿ ನೆಲಸಮವಾಗಿವೆ.
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಜೆಸಿಬಿಗಳ ಘರ್ಜನೆ ಕೇಳಿಬಂದಿದೆ. ಜೆಸಿಬಿ ಮೂಲಕ ಅಕ್ರಮ ಬಣ್ಣದ ಕಾರ್ಖಾನೆಗಳ ನೆಲ ಸಮಗೊಳಿಸಲಾಗಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿ ಸುತ್ತಮುತ್ತಲಿನ ಅಕ್ರಮ ಬಣ್ಣದ ಕಾರ್ಖಾನೆಗಳನ್ನು ತೆರವುಗೊಳಿಸಲಾಗಿದೆ. ಆನೇಕಲ್ ದಂಡಾಧಿಕಾರಿ ಹಾಗೂ ವಾಯು ಮಾಲಿನ್ಯ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ ನಡೆದಿದೆ.

ಆನೇಕಲ್ ದಂಡಾಧಿಕಾರಿ ಮಹದೇವಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಹನ್ನೆರಡು ಅಕ್ರಮ ಬಣ್ಣದ ಕಾರ್ಖಾನೆಗಳನ್ನು ಜೆಸಿಬಿ ಮೂಲಕ ತೆರವು ಗೊಳಿಸಲಾಯಿತು. ತಮಿಳುನಾಡಿನಲ್ಲಿ ನಿಷೇಧ ಆದ ಹಿನ್ನೆಲೆ ವಲಸೆ ಬಂದು ರಾಜ್ಯದ ಹಲವು ಕಡೆ ಅಕ್ರಮವಾಗಿ ಬಣ್ಣದ ಕಾರ್ಖಾನೆ ನಡೆಸುತ್ತಿದ್ದ ಅಸಾಮಿಗಳ ಮೇಲೆ ದಾಳಿ ನಡೆಸಲಾಗಿದೆ.

ಹಲವು ಬಾರಿ ರೈತ ಸಂಘಟನೆ ಹಾಗು ಗ್ರಾಮಸ್ಥರು ದೂರುಗಳ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾರಿನ ಗಾಜು ಒಡೆದು ಲಕ್ಷ ಲಕ್ಷ ಹಣ ಎಗರಿಸಿದ್ರು