Select Your Language

Notifications

webdunia
webdunia
webdunia
webdunia

ಕಾರಿನ ಗಾಜು ಒಡೆದು ಲಕ್ಷ ಲಕ್ಷ ಹಣ ಎಗರಿಸಿದ್ರು

ಕಾರಿನ ಗಾಜು ಒಡೆದು ಲಕ್ಷ ಲಕ್ಷ ಹಣ ಎಗರಿಸಿದ್ರು
ಆನೇಕಲ್ , ಗುರುವಾರ, 7 ಫೆಬ್ರವರಿ 2019 (20:13 IST)
ಲಕ್ಷ ಲಕ್ಷ ಹಣವನ್ನು ಚಾಲಾಕಿ ಕಳ್ಳರು ತಮ್ಮ ಕೈಚಳಕ ತೋರುವ ಮೂಲಕ ಎಗರಿಸಿರುವ ಘಟನೆ ನಡೆದಿದೆ.

ಮನೆ ಮಾರಾಟ ಮಾಡಿ ಬಂದ ಹಣವನ್ನು ಪಡೆದು ಕಾರಿನಲ್ಲಿ ಇಡಲಾಗಿತ್ತು. ಇದನ್ನೇ ಅವಕಾಶವಾಗಿ ಬಳಸಿಕೊಂಡ ಖದೀಮರು ಕಾರಿನ ಗಾಜು ಒಡೆದು 9 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದಾರೆ. ಆನೇಕಲ್ ನ ಉಪ ನೋಂದಣಾಧಿಕಾರಿ ಕಚೇರಿ ಬಳಿ ಘಟನೆ ನಡೆದಿದೆ.

ದಿನಕರ್ ಎಂಬುವವರಿಗೆ ಸೇರಿದ ಹಣವನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಜೆಪಿ ನಗರದ ನಿವಾಸಿ ದಿನಕರ್, ಬನಹಳ್ಳಿಯಲ್ಲಿರುವ ಮನೆಯನ್ನು ಮಾರಾಟ ಮಾಡಿದ್ದರು. ಆ ಹಣವನ್ನು ಕಾರಿನಲ್ಲಿ ಇಟ್ಟಿದ್ದರು.

ಈ ವೇಳೆ ಕಾರಿನ ಗಾಜನ್ನು ಒಡೆದು 9 ಲಕ್ಷ ಕಳವು ಮಾಡಲಾಗಿದೆ. ಈ ಕುರಿತು ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕಸದ ವಿಷಯದಲ್ಲಿಯೂ ತಿಂದು ತೇಗಿದ್ರಾ ಅಧಿಕಾರಿಗಳು?