Select Your Language

Notifications

webdunia
webdunia
webdunia
webdunia

ದೇವರಿಗೆ ತೆಂಗಿನ ಕಾಯಿ ಮತ್ತು ಬಾಳೆಹಣ್ಣನ್ನು ಮಾತ್ರವೇ ನೈವೇದ್ಯ ಮಾಡುವುದೇಕೆ?

ದೇವರಿಗೆ ತೆಂಗಿನ ಕಾಯಿ ಮತ್ತು ಬಾಳೆಹಣ್ಣನ್ನು ಮಾತ್ರವೇ ನೈವೇದ್ಯ ಮಾಡುವುದೇಕೆ?
ಬೆಂಗಳೂರು , ಮಂಗಳವಾರ, 5 ಫೆಬ್ರವರಿ 2019 (08:58 IST)
ಬೆಂಗಳೂರು: ಸಾಮಾನ್ಯವಾಗಿ ದೇವರ ಪೂಜೆಗೆ ತೆಂಗಿನ ಕಾಯಿ ಮತ್ತು ಬಾಳೆ ಹಣ್ಣು ಇಡುವುದನ್ನು ತಪ್ಪಿಸುವುದಿಲ್ಲ. ಆದರೆ ಇವೆರಡೂ ದೇವರಿಗೆ ಶ್ರೇಷ್ಠ ಯಾಕೆ ಗೊತ್ತಾ?


ದೇವಸ್ಥಾನಕ್ಕೆ ಹೋಗುವಾಗ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನು ತಪ್ಪದೇ ತೆಗೆದುಕೊಂಡು ಹೋಗುತ್ತೇವೆ. ಬೇರೆ ಯಾವ ಹಣ್ಣನ್ನೂ ತೆಗೆದುಕೊಂಡು ಹೋಗುವುದಿಲ್ಲ ಯಾಕೆ ಗೊತ್ತಾ?

ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೊಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ ಬಾಳೆಹಣ್ಣನ್ನು ನಿವೇದಿಸುತ್ತಾರೆ. ಹಾಗೆಯೇ ತೆಂಗಿನ ಕಾಯಿ ಒಡೆದು ಮಂಗಳಾರತಿ ಬೆಳಗುತ್ತಾರೆ.

ಹೆಚ್ಚಾಗಿ ನಾವು ಒಂದು ಹಣ್ಣನ್ನು ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೈಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗುತ್ತದೆ.ಆದರೆ ಬಾಳೆಹಣ್ಣನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ ಬಾಳೆಹಣ್ಣನ್ನೇ ಹಾಗೇ ಎಸೆದರೂ ಅದು ಮತ್ತೆ ಬೆಳೆಯುವುದಿಲ್ಲ. ತೆಂಗಿನ ಕಾಯಿಯೂ ಅಷ್ಟೇ.

ಹಾಗೆಯೇ ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ ಜನ್ಮವಿಲ್ಲದ ಮುಕ್ತಿಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ಧತಿಯನ್ನು ನಮ್ಮ ಹಿರಿಯರು ಮಾಡಿದ್ದಾರೆ. ತೆಂಗಿನ ಕಾಯಿ ದೇವರ ಮುಂದೆ ಒಡೆದರೆ ನಮ್ಮ ಪಾಪ ಕರ್ಮ ದೋಷವೂ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಅದೇ ಕಾರಣಕ್ಕೆ ಇವೆರಡನ್ನೂ ನೈವೇದ್ಯ ಮಾಡುವುದು ಶ್ರೇಷ್ಠವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರವಾರ ಜನಿಸಿದವರು ಈ ಉದ್ಯೋಗ ಮಾಡಿದರೆ ಯಶಸ್ಸು ಖಂಡಿತಾ