Select Your Language

Notifications

webdunia
webdunia
webdunia
webdunia

ಧರ್ಮದ ಬಗ್ಗೆ ಮಾತನಾಡುವ ಜಿಜ್ಞಾಸೆ ನನಗಿಲ್ಲ ಎಂದ ಕೇಂದ್ರ ಸಚಿವ

webdunia
ಮೈಸೂರು , ಭಾನುವಾರ, 3 ಫೆಬ್ರವರಿ 2019 (19:42 IST)
ಧರ್ಮದ ಬಗ್ಗೆ ಮಾತನಾಡುವ ಜಿಜ್ಞಾಸೆ ನನಗಿಲ್ಲ. ಹೀಗಂತ ಸದಾ ಸುದ್ದಿಯಲ್ಲಿರುವ ಇರುವ ಕೇಂದ್ರ ಸಚಿವ ಹೇಳಿದ್ದಾರೆ.

ಶ್ರೀಗಳು ಹೇಳಿದ್ದಾರೆ ಧರ್ಮ ಅಂದರೆ ಬದುಕುವ ಶೈಲಿ. ಆ ಧರ್ಮದಲ್ಲಿ ಯಾರು ಸಂಪೂರ್ಣವಾಗಿ ನಡೆದಿರುತ್ತಾರೋ ಅವರೇ ವಿಭೂತಿ ಪುರುಷರು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.

ಮೈಸೂರಿನ‌ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದು,
ಸಮಾಜವನ್ನು ದೇವರು ಅಂತ ಭಾವಿಸಿಕೊಂಡು ನಮ್ಮ ಹಿರಿಯರು ನಡೆದರು. ಜನರಲ್ಲಿ ದೇವರನ್ನು ಕಂಡರು, ಬಡವರಿಗೆ ವಿದ್ಯೆ, ಅನ್ನ ಕೊಟ್ಟರು ಅಂತವರೇ ದೇವರಾದರು. ನರನಲ್ಲಿ ನಾರಾಯಣನನ್ನ ಕಂಡವರು ದೇವರಾದರು. ಜಗತ್ತಿನಲ್ಲಿ ನರ ನಾರಾಯಣ ಆಗುತ್ತಾನೇ ಅಂದರೆ ಅದು ಭಾರತ ಮಾತ್ರ ಎಂದರು.

ಸಿದ್ದಗಂಗಾ ಶ್ರೀಗಳ ಕಾಲಘಟ್ಟದಲ್ಲಿ ನಾವಿದ್ದೇವೆ ಅಂದರೆ ನಾವು ನಿಜಕ್ಕೂ ಧನ್ಯರು. ರಾಮ, ಕೃಷ್ಣ ಮನುಷ್ಯನಾಗಿ ಹುಟ್ಟಿ , ಬದುಕಿ ದೈವರಾದವರು. ಆ ಯೋಗ್ಯತೆ ಸಿಗುವುದು ಮಾತ್ರ ಈ ಮಣ್ಣಿನಲ್ಲಿ ಹುಟ್ಟಿರುವವರಿಗೆ ಮಾತ್ರ ಎಂದು ಅವರು ಹೇಳಿದರು.Share this Story:

Follow Webdunia kannada

ಮುಂದಿನ ಸುದ್ದಿ

ಶವದ ಜೊತೆಗೆ ಸೆಕ್ಸ್ ಮಾಡಿ 6 ವರ್ಷ ಜೈಲು ಶಿಕ್ಷೆಗೆ ಗುರಿಯಾದ ದರೋಡೆಕೋರ