Select Your Language

Notifications

webdunia
webdunia
webdunia
webdunia

ದೇವರಿಗೆ ನಮಸ್ಕಾರ ಮಾಡುವಾಗ ನಿಮ್ಮ ಕೈ ಹೇಗಿರಬೇಕು? ಗಮನಿಸಿ!

ದೇವರಿಗೆ ನಮಸ್ಕಾರ ಮಾಡುವಾಗ ನಿಮ್ಮ ಕೈ ಹೇಗಿರಬೇಕು? ಗಮನಿಸಿ!
ಬೆಂಗಳೂರು , ಶನಿವಾರ, 2 ಫೆಬ್ರವರಿ 2019 (09:12 IST)
ಬೆಂಗಳೂರು: ದೇವರಿಗೆ ನಮಸ್ಕಾರ ಮಾಡುವಾಗ ಹೇಗೇಗೋ ಮಾಡಿದರೆ ಅದರ ಫಲ ದೊರೆಯದು. ಅದಕ್ಕೆ ಯೋಗ್ಯ ಪದ್ಧತಿಯಿದೆ. ಅದರ ಸೂತ್ರಗಳನ್ನು ತಿಳಿಯೋಣ.


ದೇವರಿಗೆ ನಮಸ್ಕಾರ ಮಾಡುವಾಗ ಮೊದಲು ಎದೆಯ ಮುಂದೆ ಎರಡೂ ಕೈಗಳ ಅಂಗೈಗಳನ್ನು ಒಂದರ ಮೇಲೊಂದಿಟ್ಟು ಕೈಗಳನ್ನು ಜೋಡಿಸಬೇಕು. ಕೈಗಳನ್ನು ಜೋಡಿಸುವಾಗ ಬೆರಳುಗಳನ್ನು ಸಡಿಲವಾಗಿಡಬೇಕು.

ಕೈ ಬೆರಳುಗಳ ನಡುವೆ ಅಂತರವನ್ನು ಬಿಡದೇ ಬೆರಳುಗಳನ್ನು ಜೋಡಿಸಬೇಕು. ಕೈಗಳ ಬೆರಳುಗಳನ್ನು ಹೆಬ್ಬೆರಳುಗಳಿಂದ ದೂರವಿಡಬೇಕು. ಕೈಗಳನ್ನು ಜೋಡಿಸಿದ ನಂತರ ಸ್ವಲ್ಪ ಕೆಳಕ್ಕೆ ಬಾಗಬೇಕು. ಅಂಗೈಗಳನ್ನು ಜೋಡಿಸುವಾಗ ಟೊಳ್ಳು ಬಿಡಬಾರದು.

ತಲೆಯನ್ನೂ ಸ್ವಲ್ಪ ಕೆಳಕ್ಕೆ ಬಾಗಿಸಿ ಎರಡೂ ಕೈಗಳ ಹೆಬ್ಬೆರಳುಗಳನ್ನು ಭ್ರೂಮಧ್ಯದಲ್ಲಿ ಅಂದರೆ ಕಣ್ಣಿನ ಎರಡೂ ಹುಬ್ಬುಗಳ ಮಧ್ಯಭಾಗದಲ್ಲಿಟ್ಟು ಮನಸ್ಸನ್ನು ದೇವರ ಚರಣಗಳಲ್ಲಿ ಕೇಂದ್ರೀಕರಿಸಲು ಪ್ರಯತ್ನಿಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬುಧವಾರ ಜನಿಸಿದವರು ಈ ಉದ್ಯೋಗ ಮಾಡಿದರೆ ಯಶಸ್ಸು ಖಂಡಿತಾ