Select Your Language

Notifications

webdunia
webdunia
webdunia
webdunia

ವಿಷ್ಣು ಸಹಸ್ರನಾಮ ಮತ್ತು ಗಾಯತ್ರಿ ಮಂತ್ರ ಜಪಿಸುವುದರಿಂದ ಆರೋಗ್ಯದಲ್ಲಿ ಎಂತಹಾ ಬದಲಾವಣೆಯಾಗುತ್ತದೆ ಗೊತ್ತಾ?

ವಿಷ್ಣು ಸಹಸ್ರನಾಮ ಮತ್ತು ಗಾಯತ್ರಿ ಮಂತ್ರ ಜಪಿಸುವುದರಿಂದ ಆರೋಗ್ಯದಲ್ಲಿ ಎಂತಹಾ ಬದಲಾವಣೆಯಾಗುತ್ತದೆ ಗೊತ್ತಾ?
ಬೆಂಗಳೂರು , ಗುರುವಾರ, 31 ಜನವರಿ 2019 (10:37 IST)
ಬೆಂಗಳೂರು: ನಮ್ಮ ವೇದ, ಮಂತ್ರಗಳು ಕೇವಲ ದೇವರ ಪ್ರಾರ್ಥನೆಗೆ ಮಾತ್ರವಲ್ಲ, ಅದು ನಮ್ಮ ದೇಹದ ಮೇಲೂ ಪರಿಣಾಮ ಬೀರುತ್ತವೆ. ವಿಷ್ಣು ಸಹಸ್ರನಾಮ ಮತ್ತು ಗಾಯತ್ರಿ ಮಂತ್ರ ಜಪಿಸುವುದರ ಲಾಭವೇನು ಎಂದು ಈಗ ತಿಳಿದುಕೊಳ್ಳೋಣ.


ಮನುಷ್ಯನ ಆಯಸ್ಸು ನೂರು ವರ್ಷ. ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು, ಇರುಳು ಇದೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ನಮ್ಮ ಬಲಭಾಗದಲ್ಲೂ 36 ಸಾವಿರ ನಾಡಿಗಳು ಎಡಭಾಗದಲ್ಲೂ ಇವೆ.

ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರದು. ಗಾಯತ್ರಿ ಮಂತ್ರವನ್ನು ಸಾಮಾನ್ಯವಾಗಿ ಒಂದು ಸಾವಿರದಂತೆ ದಿನಕ್ಕೆ ಮೂರು ಬಾರಿ ಮಾಡಬೇಕು. ಯಾಕೆಂದರೆ ಗಾಯತ್ರಿ ಮಂತ್ರದಲ್ಲಿ 24  ಅಕ್ಷರಗಳಿವೆ. ಒಮ್ಮೆಗೆ ಒಂದು ಸಾವಿರ ಜಪ ಎಂದರೆ 24 ಸಾವಿರ ಅಕ್ಷರ. ದಿನಕ್ಕೆ ಮೂರು ಬಾರಿ ಮಾಡಿದಾಗ 72 ಸಾವಿರ ಅಕ್ಷರ. ಇದು ನಮ್ಮ ದೇಹದಲ್ಲಿನ ನಾಡಿಗಳಿಗೆ ಸಮ.

ವಿಷ್ಣು ಸಹಸ್ರನಾಮವನ್ನು ನಾವು ಪಠಿಸುವುದರಿಂದ 72 ಸಾವಿರ ಬ್ರಹತೀಸಹಸ್ರದ ಅಕ್ಷರ ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ರಕ್ತ ಸಂಚಾರ ಪೂರ್ಣಪ್ರಮಾಣದಲ್ಲಾಗುತ್ತದೆ. ಆದ್ದರಿಂದ ವಿಷ್ಣು ಸಹಸ್ರನಾಮ ಎನ್ನುವುದು ಭವರೋಗ ನಿವಾರಕ. ಆದರೆ ಅರ್ಥ ತಿಳಿದು ಭಕ್ತಿಯಿಂದ ಪಾರಾಯಣ ಮಾಡಬೇಕಷ್ಟೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳವಾರ ಜನಿಸಿದವರು ಯಾವ ಉದ್ಯೋಗ ಮಾಡಿದರೆ ಯಶಸ್ಸು ಸಿಗುತ್ತದೆ?