Publish Date: Fri, 01 Feb 2019 (09:07 IST)
Updated Date: Fri, 01 Feb 2019 (09:08 IST)
ಬೆಂಗಳೂರು: ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ನಮ್ಮ ಕಾನೂನಿನಲ್ಲಿ ಹೇಳುತ್ತಾರೆ. ಇದು ಧಾರ್ಮಿಕವಾಗಿಯೂ ಸತ್ಯ ವಿಚಾರ.
ನಿರಪರಾಧಿಗಳಿಗೆ, ಸಜ್ಜನರಿಗೆ ತೊಂದರೆ ಕೊಡುವುದು, ಸತಾಯಿಸುವುದು, ಕೇಡು ಬಯಸುವುದು ಮಾಡಿದರೆ ಅದರ ಫಲವನ್ನು ಮುಂದಿನ ಜನ್ಮದಲ್ಲಿ ಮನುಷ್ಯ ಉಣ್ಣಬೇಕಾಗುತ್ತದೆ.
ನಿಮ್ಮಿಂದ ಕೆಡುಕಾದ ವ್ಯಕ್ತಿಗಳು ಮುಂದಿನ ಜನ್ಮದಲ್ಲಿ ನಿಮ್ಮ ಶತ್ರುವಾಗಿ ಹುಟ್ಟಿ ಅದರ ದುಪ್ಪಟ್ಟು ವೈರತ್ವ ಸಾಧಿಸುತ್ತಾರಂತೆ. ಹಾಗಾಗಿ ಯಾರಿಗೂ ಕೇಡು ಬಯಸದೇ ಸಜ್ಜನರ ಹಾದಿಯಲ್ಲಿ ನಡೆದರೆ ನಮಗೆ ಈ ಜನ್ಮ ಮಾತ್ರವಲ್ಲ, ಜನ್ಮ ಜನ್ಮಾಂತರದಲ್ಲೂ ಒಳಿತಾಗುವುದು ಎಂಬುದು ನಂಬಿಕೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ