Select Your Language

Notifications

webdunia
webdunia
webdunia
webdunia

ಕಸದ ವಿಷಯದಲ್ಲಿಯೂ ತಿಂದು ತೇಗಿದ್ರಾ ಅಧಿಕಾರಿಗಳು?

ಕಸದ ವಿಷಯದಲ್ಲಿಯೂ ತಿಂದು ತೇಗಿದ್ರಾ ಅಧಿಕಾರಿಗಳು?
ಬೊಮ್ಮನಹಳ್ಳಿ , ಗುರುವಾರ, 7 ಫೆಬ್ರವರಿ 2019 (20:05 IST)
ಕಸದ ವಿಲೇವಾರಿಯಲ್ಲಿಯೂ ಅಧಿಕಾರಿಗಳು ಬಾರಿ ಪ್ರಮಾಣದ ಗೋಲ್ ಮಾಲ್ ನಡೆಸಿರುವ ವಿಷಯ ಬೆಳಕಿಗೆ ಬಂದಿದೆ.

ಬೆಂಗಳೂರಿನ ಬೊಮ್ಮನಹಳ್ಳಿ ಬಿಬಿಎಂಪಿಯಲ್ಲಿ ಕಸ ವಿಲೇವಾರಿಯಲ್ಲಿ ಬಾರಿ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಅಕ್ರಮದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಅಧಿಕಾರಿಗಳಿಂದ ಅಧಿಕಾರಿಗಳಿಂದ ತೀವ್ರ ವಿಚಾರಣೆ ಮುಂದುವರಿದಿದೆ.

ಎಸಿಎಫ್ (Assist Controler of Finance) ರಾಜಲಕ್ಷ್ಮೀ ತೀವ್ರ ವಿಚಾರಣೆಗೊಳಗಾಗಿರುವ ಅಧಿಕಾರಿಯಾಗಿದ್ದಾರೆ.
20ಕ್ಕೂ ಹೆಚ್ಚಿನ ಅಧಿಕಾರಿಗಳಿಂದ ದಾಖಲಾತಿಗಳ ಪರಿಶೀಲನೆ ನಡೆದಿದೆ. ಬಿಬಿಎಂಪಿಯಲ್ಲಿನ ಕಡತಗಳನ್ನು ಪರಿಶೀಲನೆ ಮಾಡಿದ ಅಧಿಕಾರಿಗಳು, ಭ್ರಷ್ಟಾಚಾರದ ತನಿಖೆ ಮುಂದುವರಿಸಿದ್ದಾರೆ.

ಕಸ ವಿಲೇವಾರಿಯಲ್ಲಿ ಗೋಲ್ ಮಾಲ್ ನಡೆದಿರುವ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ದಾಳಿ ನಡೆಸಲಾಗಿದೆ. 




Share this Story:

Follow Webdunia kannada

ಮುಂದಿನ ಸುದ್ದಿ

ಕಾನೂನು ಬಾಹಿರ ಸಿಮೆಂಟ್ ಕಾರ್ಖಾನೆ ಸ್ಥಾಪನೆ?