Publish Date: Thu, 19 Oct 2023 (13:50 IST)
Updated Date: Thu, 19 Oct 2023 (09:45 IST)
ಬೆಂಗಳೂರು: ಈ ಬಾರಿ ದಸರಾ ಆಯುಧ ಪೂಜೆಗೆ ಕುಂಬಳಕಾಯಿ ಒಳಗೆ ಅರಶಿನ, ಕುಂಕುಮ ಹಾಗೂ ಸುಣ್ಣ ಇತ್ಯಾದಿಗಳನ್ನು ಬಳಸಿ ಪೂಜೆ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಕುಂಬಳಕಾಯಿ ಒಳಗೆ ಹಾಗೂ ರಂಗೋಲಿಯಲ್ಲಿ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿರುವುದು ಅನೇಕ ಹಿಂದೂ ಪರ ಸಂಘಟನೆಗಳು, ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ವಿವಾದವಾಗುತ್ತಿದ್ದಂತೇ ಸಿಎಂ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕಚೇರಿಗಳ ಒಳಗೆ, ಹೊರಗೆ ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ವಿಧಾನಸೌಧದಂತಹ ಕಚೇರಿಗಳ ನೆಲಹಾಸು, ನೆಲದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಹಿಂದಿನ ಸರ್ಕಾರಗಳೂ ಈ ಆದೇಶ ಮಾಡಿತ್ತು. ಆದರೆ ಆಗ ಅದು ಪಾಲನೆಯಾಗದಿರುವುದು ವಿಷಾಧನೀಯ ಎಂದಿದ್ದಾರೆ.