ಪಂಚರಾಜ್ಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಚಟುವಟಿಕೆ ಚುರುಕಾಗಿದೆ. ಪಂಚ ರಾಜ್ಯಗಳಿಗೆ ಹಣ ಕಳುಹಿಸುವ ಕಾಂಗ್ರೆಸ್ ಸಂಚು ಬಯಲಾಗಿದೆ. ಹೊರ ರಾಜ್ಯಗಳಿಗೆ ಎಷ್ಟು ಸಾವಿರ ಕೋಟಿ ರು. ಕಳುಹಿಸಲಾಗುತ್ತಿದೆ ಎಂಬುದು ಯಾರಿಗೂ ಅಂದಾಜು ಸಿಗುತ್ತಿಲ್ಲ. ಒಳ್ಳೆಯ ಆಡಳಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ಹಗಲು ದರೋಡೆಯಲ್ಲಿ ಮುಳುಗಿದೆ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ