Select Your Language

Notifications

webdunia
webdunia
webdunia
webdunia

ಚುನಾವಣೆಯಲ್ಲಿ ಗೆದ್ದರೆ ಐಪಿಎಲ್ ಟೀಂ ಕಟ್ಟುವುದಾಗಿ ಘೋಷಿಸಿದ ಮಧ್ಯಪ್ರದೇಶ ಕಾಂಗ್ರೆಸ್!

ಚುನಾವಣೆಯಲ್ಲಿ ಗೆದ್ದರೆ ಐಪಿಎಲ್ ಟೀಂ ಕಟ್ಟುವುದಾಗಿ ಘೋಷಿಸಿದ ಮಧ್ಯಪ್ರದೇಶ ಕಾಂಗ್ರೆಸ್!
ನವದೆಹಲಿ , ಬುಧವಾರ, 18 ಅಕ್ಟೋಬರ್ 2023 (09:20 IST)
ನವದೆಹಲಿ: ಕರ್ನಾಟಕದಂತೇ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜನರಿಗೆ ಹಲವು ಆಕರ್ಷಕ ಯೋಜನೆಗಳ ಆಫರ್ ನೀಡಿದೆ.

ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಗೆದ್ದರೆ ಮುಂದೆ ಮಧ‍್ಯಪ್ರದೇಶಕ್ಕಾಗಿಯೇ ಪ್ರತ್ಯೇಕ ಐಪಿಎಲ್ ತಂಡ ರಚಿಸುವುದಾಗಿ ವಾಗ್ದಾನ ನೀಡಿದೆ! ಕ್ರಿಕೆಟ್ ನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಥಳೀಯ ಕ್ರಿಕೆಟಿಗರಿಗೆ ಅವಕಾಶ ನೀಡುವ ಉದ್ದೇಶದಿಂದ ಹೀಗೊಂದು ವಿಶಿಷ್ಟ ಭರವಸೆ ನೀಡಿದೆ.

ಕರ್ನಾಟಕದಂತೇ ಮಧ‍್ಯಪ್ರದೇಶದಲ್ಲೂ ಐದು ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಲಾಗಿದೆ. ಒಬಿಸಿ ಸಮುದಾಯದವರಿಗೆ ಶೇ.27 ಮೀಸಲಾತಿ, ಎಲ್ಲರಿಗೂ 25 ಲಕ್ಷ ರೂ. ಆರೋಗ್ಯ ವಿಮೆ ಸೇರಿದಂತೆ ಭರವಸೆಗಳ ಮಹಾಪೂರವನ್ನೇ ಪ್ರಣಾಳಿಕೆಯಲ್ಲಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಅಭಿವೃದ್ಧಿಗೆ ಗೂಗಲ್‌ ಬದ್ಧ