Select Your Language

Notifications

webdunia
webdunia
webdunia
webdunia

‘ಕಾಂಗ್ರೆಸ್‌ SBI ಬ್ರಾಂಚ್ ಓಪನ್’

ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ
bangalore , ಮಂಗಳವಾರ, 17 ಅಕ್ಟೋಬರ್ 2023 (15:20 IST)
ಗುತ್ತಿಗೆದಾರರಿಂದ ಹಣ ಸಂಗ್ರಹಿಸಲು ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ ಅಲಿಯಾಸ್ SBI ಸ್ಥಾಪನೆ ಮಾಡಲಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ವಿಜಯೇಂದ್ರ, ದೇಶದಲ್ಲಿ RBI ಇದೆ. ಆದ್ರೆ ಕಾಂಗ್ರೆಸ್‌ನವರು SBI ಬ್ರಾಂಚ್ ಓಪನ್ ಮಾಡಿಕೊಂಡಿದ್ದಾರೆ. SBI ಎಂದರೆ ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ ಎಂದು ಡಿಕೆಶಿಗೆ ವಿಜಯೇಂದ್ರ ಟಕ್ಕರ್ ನೀಡಿದ್ರು. ಕಾಂಗ್ರೆಸ್ ಅಜೆಂಡಾ ಸ್ಪಷ್ಟವಿದೆ. ಗೊಂದಲ ಇಲ್ಲ. ಎಲ್ಲ ಮೂಲಗಳಿಂದ ಹಣ ಸಂಗ್ರಹ ಮಾಡಿ ಪಂಚ ರಾಜ್ಯಗಳಿಗೆ ಕಳಿಸೋದು. ಮತ್ತೆ ಲೋಕಸಭೆ ಚುನಾವಣೆಗೆ ಹಣ ಸಂಗ್ರಹ ಮಾಡೋದನ್ನು ಬಹಿರಂಗವಾಗಿ ಸಂಕೋಚ ಇಲ್ಲದೇ ಲೂಟಿ ಮಾಡ್ತಿದ್ದಾರೆ. ಆದರೆ ಅವರ ದುರಾದೃಷ್ಟವಶಾತ್ ಐಟಿ ದಾಳಿಯಿಂದ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ವಿಜಯೇಂದ್ರ ಕೆಣಕಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಒರಿಜಿನಲ್ JDS ಎಂದು ಬೋರ್ಡ್ ಹಾಕಿಕೊಳ್ಳಲಿ