Select Your Language

Notifications

webdunia
webdunia
webdunia
webdunia

ಪಟಾಕಿ ಗೋಡೋನ್ ದುರಂತ ಪ್ರಕರಣ ಸಂಬಂಧ ಸೆಂಟ್ ಜಾನ್ ಆಸ್ಪತ್ರೆ ವೈದ್ಯರ ವಿರುದ್ಧ ದೂರು

Pataki Godon disaster case
bangalore , ಶುಕ್ರವಾರ, 13 ಅಕ್ಟೋಬರ್ 2023 (14:41 IST)
ಅತ್ತಿಬೆಲೆ ಪಟಾಕಿ ಗೋಡೋನ್ ದುರಂತ ಪ್ರಕರಣ ಸಂಬಂಧ ಸೆಂಟ್ ಜಾನ್ ಆಸ್ಪತ್ರೆ ಹಾಗೂ ವೈದ್ಯರ ಮೇಲೆ ಎಫ್ ಐ ಆರ್  ದಾಖಲಾಯ್ತು.ಮೃತ ವೆಂಕಟೇಶ್ ಪೋಷಕರಿಂದ ಆರೋಪ ಹಿನ್ನಲೆ ಬೆಂಗಳೂರು ನಗರ ಡಿಸಿಯಿಂದ ಆಸ್ಪತ್ರೆ ಹಾಗೂ ವೈದ್ಯರಾದ ಡಾ. ಸಂಜಯ್ ಮೇಲೆ ದೂರು ದಾಖಲಾಗಿದೆ.
 
ಕುಟುಂಬಸ್ಥರ ದೂರು ಹಿನ್ನಲೆ ಎಫ್ ಐ ಆರ್  ಕೋರಮಂಗಲ ಪೊಲೀಸರು ದಾಖಲಿಸಿದ್ದಾರೆ. ವೆಂಕಟೇಷ್ ಕುಟುಂಬಸ್ಥರಿಂದ ಸೆಂಟ್ ಜಾನ್ ಆಸ್ಪತ್ರೆ ವೈದ್ಯರ ವಿರುದ್ದ ಪ್ರತಿಭಟನೆ ಮಾಡಲಾಗಿತ್ತು.ಶೇಖಡ 20 ರಷ್ಟು ಮಾತ್ರ ವೆಂಕಟೇಶ್ ಗೆ ಗಾಯಗಳಾಗಿತ್ತು.ಆದ್ರು ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೆ ಹಣಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿ ಪ್ರತಿಭಟನೆ ಸಹ ಮಾಡಿದ್ದರು.ಇನ್ನೂ  ಸ್ಥಳಕ್ಕೆ ಬಂದು ಪ್ರತಿಭಟನೆ ಕೈಬಿಡುವಂತೆ ಬೆಂಗಳೂರು ಡಿಸಿ ಮನವಿ ಮಾಡಿದ್ದು,ಆಸ್ಪತ್ರೆ ಹಾಗೂ ವೈದ್ಯರ ವಿರುದ್ದ ಕುದ್ದು ತಾನೇ ದೂರು ನೀಡೋದಾಗಿ ಹೇಳಿದ್ದರು.ನಂತರ ಪ್ರತಿಭಟನೆಯನ್ನ ಮೃತ ವೆಂಕಟೇಶ್  ಪೋಷಕರು ಕೈಬಿಟ್ಟಿದ್ರು.ಸದ್ಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಸೆಂಟ್ ಜಾನ್ ಆಸ್ಪತ್ರೆ ಹಾಗೂ ವೈದ್ಯ ಸಾಗರ್ ಮೇಲೆ ಎಫ್ ಐ ಆರ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಐಟಿ ದಾಳಿ-ಮಂಚದ ಕೆಳಗಿದ್ದ 42 ಕೋಟಿ ಹಣ ಸೀಜ್