Publish Date: Mon, 16 Oct 2023 (17:03 IST)
Updated Date: Mon, 16 Oct 2023 (19:10 IST)
ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನಂ.1ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಸಾವಿರ ಕೋಟಿ ರು. ಮತ್ತು ನಂ.2ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎರಡು ಸಾವಿರ ಕೋಟಿ ರು. ನೀಡಿ ಎಂಬ ಸೂಚನೆ ಕಾಂಗ್ರೆಸ್ ವರಿಷ್ಠರಿಂದ ಬಂದಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದ್ದು, ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಬದಲಾಗಿದೆ ಅಂತಾ ವ್ಯಂಗ್ಯ ಮಾಡಿದ್ದಾರೆ.