ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಷಿ ಕರಾಳದಿನ ಆಚರಣೆ ಮಾಡಲಾಗಿದೆ.ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಆದೇಶಿಸಿತ್ತು
.ಆದೇಶ ಖಂಡಿಸಿ ಇಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹೋರಾಟ ನಡೆಸಿದ್ದು,ಪ್ರತಿಭಟನೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಭಾಗಿಯಾಗಿದ್ರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ನೀರನ್ನ ಬಿಡ್ತಾನೆ ಇದಾರೆ.ನಮಗೆ ನೀರಿಲ್ಲ, ಕರೆಂಟ್ ಇಲ್ಲ.ತುರ್ತು ಶಾಸನ ಸಭೆ ಕರೆದು ನೀರು ಬಿಡದಿರುವ ತೀರ್ಮಾನ ತೆಗೆದು ಕೊಳ್ಳಬೇಕು.ತಮಿಳುನಾಡಿನವರು ಶಾಸನ ಸಭೆ ಕರೆದು ನಿರ್ಣಯ ಮಾಡಿದ್ದಾರೆ.ನಮ್ಮವರು ಶಾಸನ ಸಭೆ ಕರೆದು ತಿರ್ಮಾನ ತೆಗೆದು ಕೊಂಡಿಲ್ಲ.ಪಾರ್ಲಿಮೆಂಟ್ ಸದಸ್ಯರು ಎಲ್ಲಿದ್ದಾರೋ ಗೊತ್ತಿಲ್ಲ.ಕಾವೇರಿಗಾಗಿ ಎಂಪಿಗಳು ಮಾತನಾಡ್ತಿಲ್ಲ.ಕೂಡಲೇ ಅವರು ರಾಜೀನಾಮೆ ಕೊಡಬೇಕು.ನಾಳೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಶಾಸನ ಸಭೆ ಕರೆಯುವಂತೆ ಒತ್ತಾಯ ಮಾಡ್ತೇವೆ.ಅಕ್ಟೋಬರ್ 18ಕ್ಕೆ ಅತ್ತಿಬೆಲೆಯಿಂದ ಹೊಸೂರಿನವರೆಗೆ ಪ್ರತಿಭಟನೆ ಮಾಡ್ತೇವೆ.ಹೊಸೂರಿನ ತಹಶಿಲ್ದಾರರ ಕಚೇರಿ ಮುಂಭಾಗ ಪ್ರತಿಭಟನೆ ಮಾಡ್ತೇವೆ.ಸಿದ್ದರಾಮಯ್ಯ ಮೊದಲು ಹುಲಿ ಆಗಿದ್ರು ಈಗ ಡಬ್ಬದ ಗಿಣಿಯಾಗಿದ್ದಾರೆ.ಬರೀ ಶಾಸ್ತ್ರ ಹೇಳಿ ಡಬ್ಬಿಗೆ ಸೇರಿಕೊಳ್ತಿದ್ದಾರೆ.ಸಿಎಂ ಸಿದ್ದರಾಮಯ್ಯ ನೀರು ಬಿಡದ ತಿರ್ಮಾನ ತೆಗೆದು ಕೊಳ್ಳಬೇಕು ಎಂದು ವಾಟಾಳ್ ಕಿಡಿಕಾರಿದ್ದಾರೆ.