Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕು

ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕು
ಬೆಂಗಳೂರು , ಶುಕ್ರವಾರ, 21 ಸೆಪ್ಟಂಬರ್ 2018 (17:50 IST)
ರಾಜ್ಯದಲ್ಲಿ ನೈರುತ್ಯ ಮುಂಗಾರು ಜೋರಾಗಿದೆ. ಎರಡ್ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಂಡಿರುವುದರಿಂದ ರಾಜ್ಯದಲ್ಲಿ ನೈರುತ್ಯ ಮಳೆ ಚುರುಕಾಗಿದೆ. ಸೆಪ್ಟಂಬರ್ 23ರವರೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೊಡಗು, ಕೇರಳದಲ್ಲಿ ಸುರಿದ ಭಾರೀ ಮಳೆ ಪ್ರವಾಹವಾಗಿ ಹಲವು ಸಂಕಷ್ಟಗಳಿಗೆ ಕಾರಣವಾಗಿದೆ. ಅದರ ಬೆನ್ನಲ್ಲೇ ಮಳೆ ಈಗ ಉತ್ತರ ಕರ್ನಾಟಕದತ್ತ ಬರುತ್ತಿರುವುದು ಇಲ್ಲಿನ ಜನರನ್ನು ಹೈರಾಣಾಗುವಂತೆ ಮಾಡುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಶಾಮನೂರು ರಿಜೆಕ್ಟೆಡ್ ಗೂಡ್ಸ್ ಎಂದ ಬಿಜೆಪಿ ಮುಖಂಡ