Publish Date: Tue, 18 Sep 2018 (19:31 IST)
Updated Date: Tue, 18 Sep 2018 (19:37 IST)
ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿ ತನ್ನ ಆರ್ಭಟ ಹಾಗೂ ಅಬ್ಬರ ತೋರಿರುವ ಮಳೆರಾಯ ಶೀಘ್ರದಲ್ಲಿ ಉತ್ತರ ಕರ್ನಾಟಕದಲ್ಲಿ ತನ್ನ ಪ್ರತಾಪ ತೋರಲಿದ್ದಾನೆ. ಹೀಗಂತ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಎಚ್ಚರಿಕೆಯಿಂದ ಇರಬೇಕು. ಹೀಗಂತ ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ ಈಗಾಗಲೇ ಮಳೆ ಸುರಿಯುತ್ತಿದೆ. ಇನ್ನೊಂದು ನಾಲ್ಕೈದು ದಿನ ಮಳೆ ಭಾರೀ ಪ್ರಮಾಣದಲ್ಲಿ ಸುರಿಯಲಿದೆ.
ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಮಳೆ ಆಗುತ್ತಿದೆ. ಹೀಗಾಗಿ ಬರಗಾಲದ ಛಾಯೆ ಆವರಿಸಿರುವ ಉತ್ತರ ಕರ್ನಾಟಕ ಪ್ರದೇಶದಲ್ಲಿಯೂ ಮಳೆ ಅಧಿಕವಾಗಿ ಸುರಿಯಲಿದೆ.