Select Your Language

Notifications

webdunia
webdunia
webdunia
webdunia

ಲೈಂಗಿಕ ಕಿರುಕುಳ: ವಿದ್ಯಾರ್ಥಿನಿಯರ ಪೋಷಕರಿಂದ ಶಿಕ್ಷಕನಿಗೆ ಥಳಿತ

ಲೈಂಗಿಕ ಕಿರುಕುಳ: ವಿದ್ಯಾರ್ಥಿನಿಯರ ಪೋಷಕರಿಂದ ಶಿಕ್ಷಕನಿಗೆ ಥಳಿತ
ಬಾಗಲಕೋಟೆ , ಮಂಗಳವಾರ, 18 ಸೆಪ್ಟಂಬರ್ 2018 (17:30 IST)
ಆ ಶಿಕ್ಷಕ ವಿದ್ಯಾರ್ಥಿನಿಯರ ಅಂಗಾಂಗ ಸ್ಪರ್ಷಿಸುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಪೋಷಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ  ಕಿರುಕುಳ ನೀಡಿದ ಸಹಶಿಕ್ಷನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಶಾಲಾ ಮುಖ್ಯ ಕಚೇರಿಯಲ್ಲಿ ವಿದ್ಯಾರ್ಥಿನಿಯರ ಸಮ್ಮುಖದಲ್ಲೆ ಪೋಷಕರಿಂದ ಥಳಿತವಾಗಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕಲಬಂದಕೇರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ರಾಮಚಂದ್ರ ಥಳಿತಕ್ಕೊಳಗಾದ ಸಹ ಶಿಕ್ಷಕನಾಗಿದ್ದಾನೆ.

ಆರು, ಏಳನೇ ತರಗತಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಂಗಾಗ ಸ್ಪರ್ಷಿಸಿ, ಚಿವುಟುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಶಿಕ್ಷಕನ ಕೃತ್ಯದ ಬಗ್ಗೆ ಪೋಷಕರಿಗೆ ವಿದ್ಯಾರ್ಥಿನಿಯರು ತಿಳಿಸಿದ್ದರು.
ಆಕ್ರೋಶಗೊಂಡ ಪೋಷಕರು ಶಾಲೆಯ ವಿದ್ಯಾರ್ಥಿನಿಯರ ಸಮ್ಮುಖದಲ್ಲಿ ಥಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಕಮಲ: ಉಪಸಭಾಪತಿ ಹೇಳಿದ್ದೇನು ಗೊತ್ತಾ?