Select Your Language

Notifications

webdunia
webdunia
webdunia
webdunia

ಆಪರೇಷನ್ ಕಮಲ: ಉಪಸಭಾಪತಿ ಹೇಳಿದ್ದೇನು ಗೊತ್ತಾ?

ಆಪರೇಷನ್ ಕಮಲ: ಉಪಸಭಾಪತಿ ಹೇಳಿದ್ದೇನು ಗೊತ್ತಾ?
ಚಿಕ್ಕಬಳ್ಳಾಪುರ , ಮಂಗಳವಾರ, 18 ಸೆಪ್ಟಂಬರ್ 2018 (17:20 IST)
ಆಪರೇಷನ್ ಕಮಲ ಮತ್ತೆ ಸುದ್ದಿಯಲ್ಲಿರುವಂತೆ ಪರ ವಿರೋಧ ಹಾಗೂ ಆರೋಪ-ಪ್ರತ್ಯಾರೋಪಗಳು ಈ ಹಿಂದಿಗಿಂತ ಬಲವಾಗಿ ಕೇಳಿಬರುತ್ತಿವೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಉಪಸಭಾಪತಿ ಹೇಳಿದ್ದಾರೆ.

ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡುವ ಮಾತೇ ಇಲ್ಲ ಎಂದು ಉಪಸಭಾಪತಿ ಎಂ. ಕೃಷ್ಣಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ನನ್ನನ್ನು ಜನರು ಚಿಂತಾಮಣಿಯಲ್ಲಿ ಜೆಡಿಎಸ್ ಪಕ್ಷದಿಂದ ಗೆಲ್ಲಿಸಿದ್ದಾರೆ. ಕ್ಷೇತ್ರದ ಜನತೆಗೆ ದ್ರೋಹ ಮಾಡುವುದಿಲ್ಲ. ಮಾಧ್ಯಮಗಳು ಅವರ ಖುಷಿಗೆ ನನ್ನ ಬಗ್ಗೆ ಏನೇನೋ ತೋರಿಸ್ತಾ ಇದ್ದಾರೆ ಎಂದರು.

ಮಾಧ್ಯಮಗಳಲ್ಲಿ ತೋರಿಸುವ ಅಂತೆ ಕಂತೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದಿರುವ ಅವರು, ಬಿಜೆಪಿಗೆ ಸೇರುವ ವಿಚಾರ ಮಾಧ್ಯಮದವರಿಗೆ ಗೊತ್ತಾದರೆ ನನಗೆ ನೇರವಾಗಿ ದೂರವಾಣಿಯಲ್ಲಿ ಕೇಳಲಿ. ಆದರೆ ವಿನಾಕಾರಣ ಸುದ್ದಿ ಬಿತ್ತರಿಸುವುದು ಸರಿಯಲ್ಲ ಎಂದು ಎಂದು ಮಾಧ್ಯಮಗಳ ಮೇಲೆ ಅಸಮಧಾನ ವ್ಯಕ್ತಪಡಿಸಿದರು.

 

 

Share this Story:

Follow Webdunia kannada

ಮುಂದಿನ ಸುದ್ದಿ

ಯುವಕ ಯುವತಿ ಪ್ರೇಮ ಪ್ರಕರಣ: ಎರಡು ಸಮುದಾಯಗಳ ಮಧ್ಯ ಘರ್ಷಣೆ