Select Your Language

Notifications

webdunia
webdunia
webdunia
webdunia

ನಾನು ಅಪ್ಪಟ ಕಾಂಗ್ರೆಸ್ಸಿಗ ಎಂದ ಸಚಿವ

ನಾನು ಅಪ್ಪಟ ಕಾಂಗ್ರೆಸ್ಸಿಗ ಎಂದ ಸಚಿವ
ಚಾಮರಾಜನಗರ , ಮಂಗಳವಾರ, 18 ಸೆಪ್ಟಂಬರ್ 2018 (16:16 IST)
ನನ್ನ ಕಣ ಕಣದಲ್ಲೂ ಕಾಂಗ್ರೆಸ್ ಇದೆ. ನಾನು ಅಪ್ಪಟ ಕಾಂಗ್ರೆಸ್ಸಿಗ. ಪಕ್ಷ ಬಿಡುವ ಪ್ರಶ್ನೆ ಇಲ್ಲ ಸಚಿವ ಹೇಳಿದ್ದಾರೆ.

ಅಧಿಕಾರದ ದಾಹ ನನಗಿಲ್ಲ, ಕಾಂಗ್ರೆಸ್ ಬಿಡುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ಗೆ ಸಿದ್ಧಾಂತವಿದೆ, ಹೈಕಮಾಂಡ್ ಇದೆ.  ಸಿದ್ದರಾಮಯ್ಯ ಇದ್ದಾರೆ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

ಬಿಜೆಪಿಯವರು ಮೂವತ್ತು ಜನರು ರಾಜಿನಾಮೆ ನೀಡುತ್ತಾರೆಂದು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನ ಯಾವ ಎಂಎಲ್ ಎನೂ ಕೂಡ ರಾಜಿನಾಮೆ ನೀಡುವುದಿಲ್ಲ. ಚುನಾವಣಾ ಪೂರ್ವದಲ್ಲಿ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು. ಆದರೆ ಈಗ ಯಾರು ಸಂಪರ್ಕಿಸಿಲ್ಲ ಎಂದರು.

ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತೆ. ಸರ್ಕಾರ ರಚನೆಯಾಗಿ ಮೂರುವರೆ ತಿಂಗಳಾಗಿದೆ ಅಷ್ಟೆ, ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದೆ, ಕೆಲವರಿಗೆ ಸಿಕ್ಕಿಲ್ಲ ಹಾಗಾಗಿ ಕೆಲವರಿಗೆ ಅಸಮಧಾನವಿದೆ. ಸಮನ್ವಯ ಸಮಿತಿಯಲ್ಲಿ ಸಮಸ್ಯೆಗಳನ್ನ ಸಿದ್ದರಾಮಯ್ಯ ಬಗೆ ಹರಿಸಲಿದ್ದಾರೆ ಎಂದಿದ್ದಾರೆ.

ಹನೂರು ಶಾಸಕ ನರೇಂದ್ರರವರಿಗೆ ಸಚಿವ ಸ್ಥಾನ ನೀಡಿದರೆ ನನ್ನ ಅಭ್ಯಂತರವಿಲ್ಲ, ಅವರು ಮೂರು ಬಾರಿ ಗೆದ್ದಿದ್ದಾರೆ.
ನಾನು ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಡಿ.ಕೆ. ಶಿವಕುಮಾರ್ ಹಿರಿಯರಿದ್ದಾರೆ, ಇಡಿ ನೋಟಿಸ್ ನೀಡಿರುವುದು ನನಗೆ ಗೊತ್ತಿಲ್ಲ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಿಯೂ ಹೋಗುವ ನಿರ್ಧಾರ ಮಾಡಿಲ್ಲ ಎಂದ ಶಾಸಕ