Publish Date: Tue, 18 Sep 2018 (11:07 IST)
Updated Date: Tue, 18 Sep 2018 (11:10 IST)
ನವದೆಹಲಿ: ಕಾಂಗ್ರೆಸ್ ನ ಹಿರಿಯ ನಾಯಕರಾಗಿ ನಂತರ ರಾಷ್ಟ್ರಪತಿಗಳಾಗಿ ಸದ್ಯಕ್ಕೆ ರಾಜಕೀಯ ಜೀವನದಿಂದ ದೂರವಿರುವ ಪ್ರಣಬ್ ಮುಖರ್ಜಿ ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಮಾಡಿದ ಟ್ವೀಟ್ ಇದೀಗ ವೈರಲ್ ಆಗಿದೆ.
ಅಷ್ಟಕ್ಕೂ ಪ್ರಣಬ್ ಮಾಡಿದ ಟ್ವೀಟ್ ನಲ್ಲಿ ಅಂತಹದ್ದೇನಿದೆ ಅಂತೀರಾ? ಪ್ರಣಬ್ ಪಕ್ಕಾ ಕಾಂಗ್ರೆಸ್ಸಿಗರಾದರೂ ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿ, ಮುಂದಿನ ಹಲವು ವರ್ಷಗಳವರೆಗೆ ಭಾರತವನ್ನು ಆಳುವ ಶಕ್ತಿ ನಿಮಗೆ ದೇವರು ಕೊಡಲಿ ಎಂದು ಹಾರೈಸಿದ್ದಾರೆ!
ಅತ್ತ ಕಾಂಗ್ರೆಸ್ ಪ್ರಧಾನಿ ಮೋದಿ ಮುಂದಿನ ಬಾರಿ ಅಧಿಕಾರಕ್ಕೆ ಬಾರದಂತೆ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದರೆ, ಇತ್ತ ಕಾಂಗ್ರೆಸ್ ನ ಹಿರಿಯ ನಾಯಕನಿಂದ ಇಂತಹದ್ದೊಂದು ಹಾರೈಕೆ ಬಂದಿರುವುದು ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.