Select Your Language

Notifications

webdunia
webdunia
webdunia
Friday, 18 April 2025
webdunia

ಸಂಸದನ ಕಾಲು ತೊಳೆದು ನೀರು ಕುಡಿದ ಬಿಜೆಪಿ ಕಾರ್ಯಕರ್ತ!

ಬಿಜೆಪಿ
ರಾಂಚಿ , ಮಂಗಳವಾರ, 18 ಸೆಪ್ಟಂಬರ್ 2018 (09:05 IST)
ರಾಂಚಿ: ರಾಜಕೀಯ ನಾಯಕರ ಮೇಲೆ ಕಾರ್ಯಕರ್ತರಿಗೆ ಇರುವ ಅಭಿಮಾನದ ಪರಾಕಷ್ಠೆಗೆ ಉತ್ತಮ ಉದಾಹರಣೆ ಇದು. ಜಾರ್ಖಂಡ್  ರಾಜ್ಯದ ಸಂಸದರೊಬ್ಬರ ಕಾಲು ತೊಳೆದು ಬಿಜೆಪಿ ಕಾರ್ಯಕರ್ತರನೊಬ್ಬ ಅದೇ ನೀರನ್ನು ತೀರ್ಥದಂತೆ ಸೇವಿಸಿದ ಘಟನೆ ನಡೆದಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ. ಆದರೆ ಕಾಲು ತೊಳೆಸಿಕೊಂಡ ಸಂಸದ ನಿಶಿಕಾಂತ್ ದುಬೇ ಮಾತ್ರ ತಮ್ಮ ಕಾರ್ಯಕರ್ತನ ಕೆಲಸವನ್ನು ಸಮರ್ಥಿಸಿಕೊಂಡಿದ್ದು, ಇದರಲ್ಲಿ ತಪ್ಪೇನು ಎಂದು ಮರು ಪ್ರಶ್ನಿಸಿದ್ದಾರೆ!

ಜಾರ್ಖಂಡ್ ನ ಗೋದ್ದಾ ಎಂಬಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ.  ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ‘ನಿಮ್ಮ ಮೆಚ್ಚಿನ ನಾಯಕನ ಪಾದ ತೊಳೆಯುವುದರಲ್ಲಿ ತಪ್ಪೇನಿದೆ? ಬೇಕಿದ್ದರೆ ಮಹಾಭಾರತದ ಕತೆ ಓದಿ. ಇದಕ್ಕೆ ರಾಜಕೀಯ ಬಣ್ಣ ಹಚ್ಚಬೇಡಿ’ ಎಂದು ಸಂಸದ ದುಬೇ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಇದನ್ನು ಮಹಾಕಾರ್ಯವೆಂಬಂತೆ ತಮ್ಮ ಫೇಸ್ ಬುಕ್ ಪೇಜ್ ನಲ್ಲೂ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ದರ ಹೆಚ್ಚಳ ಮಾಡಿ ಕ್ಷಣದಲ್ಲೇ ಸಿಎಂ ಕುಮಾರಸ್ವಾಮಿ ಆದೇಶ ಹಿಂಪಡೆದಿದ್ದರ ಕಾರಣವೇನು ಗೊತ್ತಾ?!