Select Your Language

Notifications

webdunia
webdunia
webdunia
webdunia

ಪರೀಕ್ಷೆ ಬರೆಯಲು ತಾಳಿ ಸರ ಕಿತ್ತು ಹಾಕಲು ಹೇಳಿದ್ದಕ್ಕೆ ಪತಿ ಪ್ರತಿಭಟನೆ

ಪರೀಕ್ಷೆ ಬರೆಯಲು ತಾಳಿ ಸರ ಕಿತ್ತು ಹಾಕಲು ಹೇಳಿದ್ದಕ್ಕೆ ಪತಿ ಪ್ರತಿಭಟನೆ
ಹೈದರಾಬಾದ್ , ಸೋಮವಾರ, 17 ಸೆಪ್ಟಂಬರ್ 2018 (08:42 IST)
ಹೈದರಾಬಾದ್: ತೆಲಂಗಾಣ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆ (ಟಿಎಸ್ ಪಿಎಸ್ ಸಿ) ಯಲ್ಲಿ ಪರೀಕ್ಷೆ ಬರೆಯುವ ಮೊದಲು ಮಹಿಳೆಯೊಬ್ಬರಿಗೆ ತಾಳಿ ಸರ ಕಿತ್ತು ಹಾಕಲು ಸೂಚಿಸಿದ ಪರೀಕ್ಷಾ ಅಧಿಕಾರಿಗಳ ವಿರುದ್ಧ ಪತಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಪರೀಕ್ಷೆ ಬರೆಯುವ ಮೊದಲು ವಿವಾಹಿತ ಮಹಿಳೆಯರು ತಮ್ಮ ತಾಳಿ ಸರ ತೆಗೆದು ಪರೀಕ್ಷಾ ಕೇಂದ್ರಕ್ಕೆ ಬರಬೇಕೆಂದು ಪರೀಕ್ಷಕರು ಸೂಚಿಸಿದ್ದರು. ತಾಳಿ ಸರದೊಳಗೆ ಕಾಪಿ ಹೊಡೆಯಲು ಸಹಾಯ ಮಾಡಬಹುದಾದ ಎಲೆಕ್ಟ್ರಾನಿಕ್ ವಸ್ತುವನ್ನು ಅಳವಡಿಸಬಹುದು ಎಂಬ ಉದ್ದೇಶದಿಂದ ಈ ರೀತಿ ಆದೇಶಿಸಲಾಗಿತ್ತು.

ಆದರೆ ಮಹಿಳೆ ಇದು ಮಂಗಳಸೂತ್ರ ತೆಗೆಯುವುದು ಹಿಂದೂ ಸಂಸ್ಕೃತಿಗೆ ವಿರುದ್ಧವಾದುದು ಎಂದು ಪರೀಕ್ಷಕರಿಗೆ ಮನವರಿಕೆ ಮಾಡಲು ಯತ್ನಿಸದರೂ ಅವರು ಕಿವಿಗೊಡಲಿಲ್ಲ. ಇದರಿಂದ ನೊಂದ ಪತಿ ಪರೀಕ್ಷಾ ಕೇಂದ್ರದ ಹೊರಗೆ ಭಾರೀ ಕೂಗಾಟ ನಡೆಸಿದ್ದರು. ನಂತರ ಈ ವಿಷಯ ಪೊಲೀಸರ ಗಮನಕ್ಕೂ ಬಂತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆಗೆ ತಾಳಿ ಸರ ಸಮೇತ ಪರೀಕ್ಷೆ ಬರೆಯಲು ಅನುಮತಿ ಕೊಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ಸುಬ್ರಮಣಿಯನ್ ಸ್ವಾಮಿ