Select Your Language

Notifications

webdunia
webdunia
webdunia
webdunia

ಇಂದು ಪ್ರಧಾನಿ ಮೋದಿ ಜನ್ಮದಿನ: ಆಚರಣೆ ಎಲ್ಲಿ ಗೊತ್ತಾ?

ಇಂದು ಪ್ರಧಾನಿ ಮೋದಿ ಜನ್ಮದಿನ: ಆಚರಣೆ ಎಲ್ಲಿ ಗೊತ್ತಾ?
ನವದೆಹಲಿ , ಸೋಮವಾರ, 17 ಸೆಪ್ಟಂಬರ್ 2018 (09:40 IST)
ನವದೆಹಲಿ: ಇಂದು ಪ್ರಧಾನಿ ಮೋದಿಗೆ 68 ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ದಿನವನ್ನು ಅವರು ತಮ್ಮ ತವರು ರಾಜ್ಯ ಗುಜರಾತ್ ನ ವಾರಣಾಸಿಯಲ್ಲಿ ಆಚರಿಸಿಕೊಳ್ಳಲಿದ್ದಾರೆ.

ಸ್ವಕ್ಷೇತ್ರವಾದ ವಾರಣಾಸಿಯಲ್ಲಿ ಶಾಲಾ ಮಕ್ಕಳೊಂದಿಗೆ ಮೋದಿ ಜನ್ಮದಿನ ಆಚರಣೆ ಮಾಡಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ವಾರಣಾಸಿಯಲ್ಲಿ ಭರ್ಜರಿ ಸಿದ್ಧತೆ ಕೈಗೊಳ್ಳಲಾಗಿದೆ.

ಇಂದು ಅಪರಾಹ್ನ ವಾರಣಾಸಿಗೆ ಮೋದಿ ಆಗಮಿಸುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೆ, ತಾವು ದತ್ತು ಪಡೆದ ಜಯಪುರ, ನಾಗೇಪುರ್ ಮತ್ತು ಕಕ್ರಾಹಿಯಾ ಗ್ರಾಮಗಳಿಗೂ ಪ್ರಧಾನಿ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೀವನಾಧಾರಿತ ಚಲೋ ಜೀತೇಂ ಹಂ ಸಾಕ್ಷ್ಯ ಚಿತ್ರದ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.  ಇನ್ನು ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು, ಜನ ಸಾಮಾನ್ಯರು ಶುಭಾಷಯ ಕೋರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ 24 ಗಂಟೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಕಾದಿದೆಯಾ ಆಪತ್ತು?!