Publish Date: Sun, 16 Sep 2018 (15:35 IST)
Updated Date: Sun, 16 Sep 2018 (15:37 IST)
ಸ್ವಚ್ಛತೆಯೇ ಸೇವಾ ಅಭಿಯಾನದ ಅಂಗವಾಗಿ ಬಿಸಿಲುನಗರಿಯಲ್ಲಿ ಶಾಸಕರೊಬ್ಬರು ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆಯ ಕೆಲಸ ಮಾಡಿದ್ದಾರೆ.
ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆ ಮಾಡುತ್ತಿರುವ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸ್ವಚ್ಛತೆ ಕಾರ್ಯ ಮಾಡಿದರು.
ಯಾದಗಿರಿ ನಗರದ ವಾರ್ಡ್ 15 ರ ಕಾಜಗಾರ ಓಣಿಯಲ್ಲಿ ಸ್ವಚ್ಛಾತಾ ಅಭಿಯಾನದ ಅಂಗವಾಗಿ ನಗರದ ಸ್ವಚ್ಛತೆ ಗೆ ಮುಂದಾದ ಶಾಸಕ ವೆಂಕಟರೆಡ್ಡಿ ಮುದ್ನಾಳ ಗಮನ ಸೆಳೆದರು.
ಸ್ವಚ್ಛತೆಯೇ ಸೇವಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಬೆನ್ನಲ್ಲೇ ಬಿಜೆಪಿ ಶಾಸಕರು, ಕಾರ್ಯಕರ್ತರು ಸ್ವಚ್ಛತೆಯ ಕೆಲಸ ಮಾಡುತ್ತಿದ್ದಾರೆ.
ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಗೌಡ ಮಾಗನೂರ, ಬಿಜೆಪಿ ನಗರಸಭೆ ಸದಸ್ಯರು ಹಾಗೂ ಕಾರ್ಯಕರ್ತ ರು ಸ್ವಚ್ಛತಾ ಅಭಿಯಾನದ ಅಂಗವಾಗಿ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದರು.