Select Your Language

Notifications

webdunia
webdunia
webdunia
webdunia

ತಪ್ಪು ನಿಮ್ಮಲ್ಲೇ ಇಟ್ಕೊಂಡು ನಮ್ಮನ್ನು ಯಾಕೆ ದೂಷಿಸ್ತೀರಿ? ಬಿಜೆಪಿ ಪ್ರಶ್ನೆ

ತಪ್ಪು ನಿಮ್ಮಲ್ಲೇ ಇಟ್ಕೊಂಡು ನಮ್ಮನ್ನು ಯಾಕೆ ದೂಷಿಸ್ತೀರಿ? ಬಿಜೆಪಿ ಪ್ರಶ್ನೆ
ಬೆಂಗಳೂರು , ಭಾನುವಾರ, 16 ಸೆಪ್ಟಂಬರ್ 2018 (08:24 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ತನ್ನ ಮೇಲೆ ಬಂದಿರುವ ಆರೋಪಗಳಿಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

ನಿಮ್ಮ ಇಡೀ ಸರ್ಕಾರ ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ಕುಟುಂಬದ ಪ್ರಭಾವಿ ಹಿಡಿತದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಅವರ ಶಾಸಕರ ಧ್ವನಿ ಬಲವಂತವಾಗಿ ಅಡಗಿಸಿರುವಾಗ ಅವರು ಹೇಗೆ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ‍್ಯ? ರಾಜ್ಯ ಸರ್ಕಾರದ ಗೊಂದಲಗಳಿಗೆ ನಾವು ಕಾರಣರಲ್ಲ. ನಿಮ್ಮಲ್ಲೇ ತಪ್ಪುಗಳಿವೆ ಎಂದು ಕರ್ನಾಟಕ ಬಿಜೆಪಿ ಟ್ವಿಟರ್ ಮೂಲಕ ತಿರುಗೇಟು ನೀಡಿದೆ.

ಇನ್ನು ಬಿಜೆಪಿ ರಾಜ್ಯಾಧ‍್ಯಕ್ಷ ಯಡಿಯೂರಪ್ಪ ಕೂಡಾ ಇದೇ ಅರ್ಥದಲ್ಲಿ ಮಾತನಾಡಿದ್ದಾರೆ. ಶಾಸಕರ ಕುದುರೆ ವ್ಯಾಪಾರದ ಕುರಿತು ಐಟಿ ವಿಭಾಗಕ್ಕೆ ದೂರು ನೀಡಿರುವ ಕಾಂಗ್ರೆಸ್ ಈ ಮೂಲಕ ತನ್ನ ದಿವಾಳಿತನ ತೋರಿಸಿಕೊಂಡಿದೆ ಎಂದು ಯಡಿಯೂರಪ್ಪ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ತಾನು ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯಿಂದಲೇ ಮಗಳ ಮೇಲೆ ಐದು ಬಾರಿ ಅತ್ಯಾಚಾರ ಮಾಡಿಸಿದ ಕ್ರೂರಿ ತಾಯಿ