Select Your Language

Notifications

webdunia
webdunia
webdunia
webdunia

ನಿಶ್ಚಿತಾರ್ಥ ಮುರಿದುಬಿದ್ದ ಕುರಿತು ಮೌನ ಮುರಿದ ರಶ್ಮಿಕಾ ಮಂದಣ್ಣ

ಬೆಂಗಳೂರು
ಬೆಂಗಳೂರು : ಕಳೆದ ವರ್ಷ ಎಂಗೇಜ್ ಮೆಂಟ್ ಮಾಡಿಕೊಂಡ ಸ್ಯಾಂಡಲ್ ವುಡ್ ನ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಇತ್ತೀಚೆಗೆ ಮುರಿದು ಬಿದಿದ್ದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್, ಕಾಮೆಂಟ್ ಮಾಡುವವರಿಗೆ  ನಟಿ ರಶ್ಮಿಕಾ ಇದೀಗ ಸ್ಪಷ್ಟನೆ ನೀಡಿದ್ದಾರೆ.


ಈ ಬಗ್ಗೆ ಇಷ್ಟು ದಿನ ಸೈಲೆಂಟ್ ಆಗಿದ್ದ ನಟಿ‍ ರಶ್ಮಿಕಾ ಇದೀಗ ಫೇಸ್ ಬುಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. “ನಾನು ಇಷ್ಟು ದಿನ ಸೈಲೆಂಟ್ ಆಗಿ ಇರುವುದಕ್ಕೆ ನನ್ನನ್ನು ಕ್ಷಮಿಸಿ. ನಾನು ಸುಮಾರು ದಿನದಿಂದ ಗಮನಿಸುತ್ತಿದ್ದೀನಿ. ನನ್ನ ಬಗ್ಗೆ ಸಾಕಷ್ಟು ಕತೆಗಳು, ಲೇಖನಗಳು, ಕಮೆಂಟ್ಸ್ ಹಾಗೂ ಟ್ರೋಲ್ ಮಾಡುತ್ತಿರುವುದನ್ನು ಗಮನಿಸುತ್ತಿದ್ದೀನಿ. ನೀವು ನನ್ನನ್ನು ಈ ರೀತಿ ತೋರಿಸುವುದನ್ನು ನೋಡಿ ನಾನು ಸಾಕಷ್ಟು ಬೇಸತ್ತಿದ್ದೇನೆ. ಇದಕ್ಕೆ ನಾನು ನಿಮ್ಮನ್ನು ದೂರುವುದಿಲ್ಲ. ಏಕೆಂದರೆ ನೀವು ಇದನ್ನೇ ನಂಬುತ್ತೀರಾ” ಎಂದು ಪೋಸ್ಟ್ ಮಾಡಿದ್ದಾರೆ.


ಹಾಗೇ “ಸದ್ಯ ಚಿತ್ರರಂಗದಲ್ಲಿ ಕೆಲಸ ಮಾಡುವವರನ್ನು ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ ಎಂದು ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೀನಿ. ಅಲ್ಲದೇ ನಾನು ಕನ್ನಡ ಚಿತ್ರಗಳಲ್ಲಿ ನಟಿಸಲು ಮುಂದುವರೆಸುತ್ತೇನೆ. ಯಾವುದೇ ಭಾಷೆಯಾಗಲಿ, ಯಾವುದೇ ಚಿತ್ರರಂಗ ಆಗಲಿ ನಾನು ನನ್ನ ಬೆಸ್ಟ್ ಶಾಟ್ ನೀಡುತ್ತೇನೆ. ನಾನು ಇಲ್ಲೇ ಇರಲು ಬಂದಿದ್ದೇನೆ. ಧನ್ಯವಾದಗಳು” ಎಂದು ರಶ್ಮಿಕಾ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನ ನಟ ವಿಷ್ಣುವರ್ಧನ್, ಉಪೇಂದ್ರ ಹಾಗು ನಟಿ ಶ್ರುತಿಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ