Select Your Language

Notifications

webdunia
webdunia
webdunia
webdunia

ಶಾಮನೂರು ರಿಜೆಕ್ಟೆಡ್ ಗೂಡ್ಸ್ ಎಂದ ಬಿಜೆಪಿ ಮುಖಂಡ

ಶಾಮನೂರು ರಿಜೆಕ್ಟೆಡ್ ಗೂಡ್ಸ್ ಎಂದ ಬಿಜೆಪಿ ಮುಖಂಡ
ದಾವಣಗೆರೆ , ಶುಕ್ರವಾರ, 21 ಸೆಪ್ಟಂಬರ್ 2018 (17:30 IST)
ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನ ರಿಜೆಕ್ಟೆಡ್ ಗೂಡ್ಸ್ ಹೀಗಂತ ಬಿಜೆಪಿ ಮುಖಂಡ ಟೀಕೆ ಮಾಡಿದ್ದಾರೆ.

ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನಲ್ಲಿ ರಿಜೆಕ್ಟೆಡ್ ಗೂಡ್ಸ್ ನಂತಿದ್ದಾರೆ. ಅಂತವರು ಬಿಜೆಪಿಗೆ ಅವಶ್ಯ ಇಲ್ಲ ಎಂದು ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಅವರಪ್ಪನಿಗೂ ನನ್ನನ್ನ ಸಂಪರ್ಕಿಸಲು ಆಗಲ್ಲ ಎಂಬ ಶಾಮನೂರು ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜಾಧವ್, ಅವನ್ಯಾರು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ತಾರೆ. ಅವರನ್ನ ಕಾಂಗ್ರೆಸ್ ನಲ್ಲಿಯೇ ಕೇಳೋರಿಲ್ಲ. ಅವರಿಗೆ ಮಂತ್ರಿ ಸ್ಥಾನ ತೆಗೆದುಕೊಳ್ಳುವ ಶಕ್ತಿ ಇಲ್ಲ. ಅಂಥವರು ನಮ್ಮ ಬಿಜೆಪಿ ಪಕ್ಷಕ್ಕೆ ಅವಶ್ಯಕತೆ ಇಲ್ಲ. ಅಂಥವರನ್ನು ತೆಗೆದುಕೊಂಡು ನಾವೇನು ಮಾಡೋಣ ಎಂದು ಶಾಮನೂರು ಶಿವಶಂಕರಪ್ಪನವರ ವಿರುದ್ಧ ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಚಾಟಿ ಬೀಸಿದ್ದಾರೆ.

 

 

 

Share this Story:

Follow Webdunia kannada

ಮುಂದಿನ ಸುದ್ದಿ

ಒಂದೆಡೆ ಮಳೆ ಮತ್ತೊಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ..!