Select Your Language

Notifications

webdunia
webdunia
webdunia
webdunia

ನಮ್ಮ ಸಮುದಾಯದ ಶಾಮನೂರು ಶಿವಶಂಕರಪ್ಪರಿಗೆ ಡಿಸಿಎಂ ಸ್ಥಾನ ಕೊಟ್ಟರೂ ಬೇಜಾರಿಲ್ಲ- ಶಾಸಕ ಎಂ.ಬಿ.ಪಾಟೀಲ್

ನಮ್ಮ ಸಮುದಾಯದ ಶಾಮನೂರು ಶಿವಶಂಕರಪ್ಪರಿಗೆ ಡಿಸಿಎಂ ಸ್ಥಾನ ಕೊಟ್ಟರೂ ಬೇಜಾರಿಲ್ಲ- ಶಾಸಕ ಎಂ.ಬಿ.ಪಾಟೀಲ್
ಬೆಂಗಳೂರು , ಮಂಗಳವಾರ, 22 ಮೇ 2018 (14:01 IST)
ಬೆಂಗಳೂರು : ದಕ್ಷಿಣ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆದಾಗ, ಉತ್ತರ ಕರ್ನಾಟಕದವರಿಗೆ ಡಿಸಿಎಂ ಸ್ಥಾನ ಕೊಡಲಿ . ನಮ್ಮ ಸಮುದಾಯದಿಂದ 16 ಜನ ಆಯ್ಕೆ ಆಗಿ ಬಂದಿದ್ದೇವೆ. ಹಾಗಾಗಿ ನಮ್ಮ ಸಮುದಾಯದ ಶಾಮನೂರು ಶಿವಶಂಕರಪ್ಪರಿಗೆ ಡಿಸಿಎಂ ಸ್ಥಾನ ಕೊಟ್ಟರೂ ಬೇಜಾರಿಲ್ಲ ಎಂದು ಶಾಸಕ ಎಂ.ಬಿ.ಪಾಟೀಲ್ ಅವರು ಹೇಳಿದ್ದಾರೆ.

ಈ ಬಗ್ಗೆ  ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ನನಗೆ ಜಲಸಂಪನ್ಮೂಲ ಖಾತೆಯೇ ಬೇಕಿಂದಿಲ್ಲ. ಸಮ್ಮಿಶ್ರ ಸರ್ಕಾರ ಇರುವುದರಿಂದ ಅದರ ಬಗ್ಗೆ ನಾಯಕರು ತೀರ್ಮಾನ ಮಾಡಬೇಕು. ಎರಡು ಡಿಸಿಎಂ ಹುದ್ದೆ ಬೇಕಿದೆ. ದಕ್ಷಿಣದಲ್ಲಿ ಪರಮೇಶ್ವರ್, ಡಿಕೆಶಿಗೆ ಕೊಟ್ಟರೆ, ಉತ್ತರದಲ್ಲೂ ಒಬ್ಬರಿಗೆ ಅವಕಾಶ ಮಾಡಿಕೊಡಲಿ, ನಾನಾಗಬಹುದು, ಶಾಮನೂರು ಆಗಬಹುದು ಯಾರಿಗೆ ಬೇಕಾದರೂ ಕೊಡಲಿ, ಶಾಮನೂರಿಗೆ ಡಿಸಿಎಂ ಸ್ಥಾನ ಕೊಟ್ಟರೂ ಬೇಜಾರಿಲ್ಲ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಎಚ್ ಡಿಕೆ ಜತೆ ಪ್ರಮಾಣ ವಚನ ಸ್ವೀಕರಿಸಲಿರುವ ಒಬ್ಬನೇ ಒಬ್ಬ ಸಚಿವರು ಯಾರು?