Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಪಾಲಿಗೆ ನಿಜವಾಗುತ್ತಾ ಹವಾಮಾನ ಇಲಾಖೆಯ ಭವಿಷ್ಯ?!

ಬೆಂಗಳೂರಿನ ಪಾಲಿಗೆ ನಿಜವಾಗುತ್ತಾ ಹವಾಮಾನ ಇಲಾಖೆಯ ಭವಿಷ್ಯ?!
ಬೆಂಗಳೂರು , ಶನಿವಾರ, 15 ಸೆಪ್ಟಂಬರ್ 2018 (09:11 IST)
ಬೆಂಗಳೂರು: ಕೇರಳ ಮತ್ತು ಕೊಡಗಿನಲ್ಲಿ ಪ್ರವಾಹ ಉಂಟಾದಾಗ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿತ್ತು.
 

ಅಷ್ಟೇ ಅಲ್ಲದೆ, ನಗರದ ಕೆಲವು ಪ್ರದೇಶಗಳನ್ನು ಅಪಾಯಕಾರಿ ಪ್ರದೇಶ ಎಂದು ಬಿಬಿಎಂಪಿ ಗುರುತಿಸಿತ್ತು. ಅದು ನಿಜವಾಗುವ ಭೀತಿ ಇದೀಗ ನಗರದ ಜನರಿಗೆ ಎದುರಾಗಿದೆ.

ಕಳೆದ ಎರಡು ದಿನಗಳಿಂದ ನಗರದಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಭಾರೀ ಮಳೆಯಾಗುತ್ತಿದ್ದು ಇಂದೂ ಕೂಡಾ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಭಾರೀ ಗುಡುಗು, ಗಾಳಿ ಸಮೇತ ಮಳೆಯಾಗುತ್ತಿದ್ದು, ಜನ ಜೀವನಕ್ಕೆ ತೊಂದರೆಯಾಗಿದೆ. ಬೆಂಗಳೂರಿನ ಉತ್ತರ ಭಾಗದಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಹಲೆವೆಡೆ ಮರಗಳು ಧರೆಗುರುಳಿದ್ದು, ಮನೆ ಕುಸಿದ ಘಟನೆಯೂ ನಡೆದಿದೆ. ರಸ್ತೆಯಲ್ಲಿ ನೀರು ತುಂಬಿದ್ದಲ್ಲದೆ, ಮಳೆಯಿಂದಾಗಿ ಬಸ್ ಸಂಚಾರವೂ ವಿರಳವಾಗಿ ಜನರು ಸಂಜೆ ವೇಳೆಗೆ ಮನೆಗೆ ಮರಳುವುದು ಕಷ್ಟವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಕಮಲ ಮಾಡಲು ಹೊರಟ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ಸೂಚನೆ?