Select Your Language

Notifications

webdunia
webdunia
webdunia
webdunia

ಭಾರಿ ಮಳೆಗೆ ಜನರು ಕಂಗಾಲು

ಭಾರಿ ಮಳೆಗೆ ಜನರು ಕಂಗಾಲು
ಗದಗ , ಶುಕ್ರವಾರ, 21 ಸೆಪ್ಟಂಬರ್ 2018 (16:21 IST)
ಕಳೆದ ರಾತ್ರಿ ಸುರಿದ ಭಾರಿ ಮಳೆ ಅಲ್ಲಿನ ಜನರ ನಿದ್ದೆಗೆಡಿಸಿದೆ.

ನಿರಂತರವಾಗಿ ಸುರಿದ ಮಳೆ ಗದಗ- ಬೆಟಗೇರಿ ಜನರ ನಿದ್ದೆಗೆಡಿಸಿದೆ. ಬೆಟಗೇರಿಯ ವಾಂಬೆ ಬಡಾವಣೆ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದ್ದು, ಜನರು ಪರಿತಪಿಸುವಂತಾಯಿತು. ಭಾರಿ ಮಳೆಯಿಂದ ರಾಜಕಾಲುವೆ ಒಡೆದು ಅಪಾರ ನೀರು ಬಡಾವಣೆಗೆ ನುಗ್ಗಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಇದರಿಂದ ಮಹಿಳೆಯರ ಕಣ್ಣೀರು ಹಾಕಿದರು.

ರಾತ್ರಿಯಿಡೀ ‌ಮನೆಯಲ್ಲಿನ ನೀರು ಹೊರಹಾಕಲು ಹರಸಾಹಸ ಪಡಬೇಕಾಯಿತು. ನಡುರಾತ್ರಿ ಬಡಾವಣೆಗೆ ಶಾಸಕ ಎಚ್.ಕೆ ಪಾಟೀಲ್ ಭೇಟಿ ನೀಡಿದರು. ಈ ವೇಳೆ ಸಮಸ್ಯೆ ಶಾಶ್ವತವಾಗಿ ಬಗೆಹರಿಸಿ ಎಂದು ಶಾಸಕರ ಕಾರಿಗೆ ಸ್ಥಳೀಯರು ಘೇರಾವ್ ಹಾಕಿದರು. ಬೆಳಿಗ್ಗೆ ವಿಷಯ ತಿಳಿಸಿದ್ರೂ ಸ್ಥಳಕ್ಕೆ ಬಾರದ ನಗರಸಭೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸ್ಥಳಕ್ಕೆ ಡಿಸಿ ಎಮ್.ಜಿ ಹಿರೇಮಠ, ಎಸಿ ಮಂಜುನಾಥ, ತಹಶಿಲ್ದಾರ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯಗೆ ಸ್ಪಂಧಿಸುವ ಭರವಸೆ ನೀಡಿದರು.



 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುಮಾರಸ್ವಾಮಿ ದಂಗೆ ಹೇಳಿಕೆಗೆ ದೋಸ್ತಿ ಸರ್ಕಾರದಿಂದ ಅಸಮಾಧಾನ