Select Your Language

Notifications

webdunia
webdunia
webdunia
webdunia

‘ದೇಶ ಹಾಳು ಮಾಡೋಕೆ ಸೋಷಿಯಲ್ ಮೀಡಿಯಾ ಸಾಕು ಎಂದ ಕುಮಾರಸ್ವಾಮಿ’

‘ದೇಶ ಹಾಳು ಮಾಡೋಕೆ ಸೋಷಿಯಲ್ ಮೀಡಿಯಾ ಸಾಕು ಎಂದ ಕುಮಾರಸ್ವಾಮಿ’
ಬೆಂಗಳೂರು , ಮಂಗಳವಾರ, 23 ಜುಲೈ 2019 (18:15 IST)
ದೇಶ ಹಾಳು ಮಾಡೋಕೆ ಅಂತಾನೆ ಸೋಷಿಯಲ್ ಮೀಡಿಯಾಗಳು ಹುಟ್ಟಿಕೊಂಡಿವೆ. ಹೀಗಂತ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ವಿಶ್ವಾಸ ಮತ ಯಾಚನೆ ಸಂದರ್ಭ ನಡೆದ ಚರ್ಚೆಯಲ್ಲಿ ಮಾತನಾಡಿರೋ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸೋಷಿಯಲ್ ಮೀಡಿಯಾಗಳ ಹಾವಳಿ ವಿಪರೀತವಾಗಿದೆ. ಅವುಗಳಿಗೆ ಕಡಿವಾಣ ಬೀಳುತ್ತಿಲ್ಲ. ರಾಜ್ಯ ಸರಕಾರ ಆಡಳಿತಕ್ಕೆ ಬಂದ ಮೊದಲ ದಿನದಿಂದಲೂ ಈವರೆಗೆ ಅಪಪ್ರಚಾರದಲ್ಲಿ ತೊಡಗಿವೆ ಎಂದು ದೂರಿದರು.

ನೈತಿಕತೆಯನ್ನು ಮರೆತಿರುವ ಸೋಷಿಯಲ್ ಮೀಡಿಯಾಗಳು ಭವಿಷ್ಯ ಹೇಳುವಂತೆ ಸುಳ್ಳು ಸುದ್ದಿಗಳನ್ನು ಪ್ರಕಟ ಮಾಡಲು ಆತುರ ತೋರುತ್ತಿವೆ ಎಂದು ಗರಂ ಆದರು.

ಇದೇ ವೇಳೆ, ವಿದ್ಯುನ್ಮಾನ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳ ನಿಯಂತ್ರಣಕ್ಕೆ ಕ್ರಮ ಅಗತ್ಯವಾಗಿ ತರಬೇಕು ಅಂತ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ ಮಾಡಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯ ರೋಡ್ ನಲ್ಲಿ ಹೈಡ್ರಾಮಾ: ನಿಷೇಧಾಜ್ಞೆ