Publish Date: Tue, 23 Jul 2019 (16:34 IST)
Updated Date: Tue, 23 Jul 2019 (16:36 IST)
ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರೋ ಪ್ರಕರಣ ಹೆಚ್ಚುತ್ತಿರೋವಾಗಲೇ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಮಾನವನ್ನು ಇದರಲ್ಲೇ ಕಳೆದಿದ್ದಾನೆ.
ಪತ್ನಿ ಜತೆಗೆ ಜಗಳ ತೆಗೆದಿದ್ದ ಭೂಪನೊಬ್ಬ ತನ್ನ ಹೆಂಡತಿಯ ನಗ್ನ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾನೆ.
ತನ್ನ ಭಾವಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ನೋಡಿದ ಪತ್ನಿ ಗರಂ ಆಗಿದ್ದು, ಗಂಡನ ವಿರುದ್ಧ ಕೇಸ್ ದಾಖಲು ಮಾಡಿದ್ದಾಳೆ.
ಓಡಿಸ್ಸಾದ ನಯಾಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹೆಂಡತಿಯ ಅಶ್ಲೀಲ ವಿಡಿಯೋ ವೈರಲ್ ಮಾಡಿರುವ ಭೂಪ ಗಂಡ ಓಡಿಹೋಗಿದ್ದಾನೆ.
ಕೇಸ್ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.